ಮಡಿಕೇರಿ ಫೆ.14 : ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿಯೇ “ಪೂರ್ಣ ಸ್ವರಾಜ್”ನ್ನು ಸಾಕಾರ ಗೊಳಿಸಿದ್ದು ಕಾಂಗ್ರೆಸ್ಸಿನ ಸಾಧನೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯದ ಉಸ್ತುವಾರಿ ಹೊತ್ತಿರುವ ಮಾಜಿ ಸಂಸದ ನಾರಾಯಣ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ಗ್ರಾಮ ಸ್ವರಾಜ್ ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ವಿಚಾರ ಮಂಡಿಸಿದÀರು. 1929ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪಂಡಿತ್ ಜವಾಹರ್‍ಲಾಲ್ ನೆಹರೂರವರ ಅಧ್ಯಕ್ಷತೆಯಲ್ಲಿ “ಪೂರ್ಣ ಸ್ವರಾಜ್” ವiಸೂದೆಯನ್ನು ಮಂಡಿಸಲಾಗಿತ್ತು. ನಂತರದ ದಿನಗಳಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ದೂರ ದೃಷ್ಟಿತ್ವದಿಂದ ಸಂವಿಧಾನದ 73ನೇ ತಿದ್ದುಪಡಿಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಶ್ರೀ ಸಾಮಾನ್ಯನ ಕೈಗೆ ಅಧಿಕಾರ ದೊರೆಯುವಂತೆ ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು ಎಂದು ಅಭಿಪ್ರಾಯಪಟ್ಟ ನಾರಾಯಣ ಸ್ವಾಮಿ, ದೇಶದ ಅಭಿವೃದ್ಧಿಗೆ ಇದು ನಾಂದಿಯಾಗಿದೆ ಎಂದರು. ರಾಜೀವ್‍ಗಾಂಧಿ ಪಂಚಾಯತ್ ರಾಜ್ ಘಟಕ ಸುಮಾರು 11 ರಾಜ್ಯಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ಪ್ರಬಲ ವಾಗಿ ಸಂಘಟಿಸಲು ಕರೆ ನೀಡಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಬಗ್ಗೆ ವಿಚಾರ ಮಂಡಿಸಿದ ರಾಜ್ಯ ಸಂಘಟಕ ಬಿ.ಎಂ. ಸಂದೀಪ್, ಜೂನ್ ತಿಂಗಳೊಳಗೆÀ ಎಲ್ಲಾ ಗ್ರಾ.ಪಂ. ಮಟ್ಟದಲ್ಲಿ ಸಂವಾದ ಕಾರ್ಯಕ್ರಮ ನಡೆಸುವಂತೆ ಜಿ.ಪಂ ಸಂಘಟಕರಿಗೆ ಕರೆ ನೀಡಿದರು.

ಪಂಚಾಯತ್ ರಾಜ್ ಕಾಯ್ದೆಯ ತಿದ್ದುಪಡಿ 1993 ಮತ್ತು 2015ರ ಪಕ್ಷಿನೋಟ ಇದರ ಬಗ್ಗೆ ವಿಚಾರ ಮಂಡಿಸಿದ ರಾಜ್ಯ ಉಚ್ಚನ್ಯಾಯಾಲಯದ ವಕೀಲ ಚಂದ್ರಮೌಳಿ ಈ ಹಿಂದೆ ಇದ್ದ ಕಾಯ್ದೆ ಹಾಗೂ 2015ರ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಗಳ ಬಗ್ಗೆ ವಿವರಿಸಿದರು.

ವಿಕೇಂದ್ರೀಕರಣ ಯೋಜನೆ ಮತ್ತು ಹಣಕಾಸು ಕುರಿತು ವಿಚಾರ ಮಂಡಿಸಿದ ಜಿ.ಪಂ. ಮಾಜಿ ಸದಸ್ಯ ವಿ.ಪಿ. ಶಶಿಧರ್ ನಿಯಮಗಳು, ಯೋಜನೆಗಳು ದಾಖಲೆಗಳಿಸಿದರೆ ಸಾಲದು, ಅನುಷ್ಠಾನಗೊಳಿಸಲು ಸದಸ್ಯರುಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.

ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ ಮಾತನಾಡಿ ಕಾರ್ಯಾಗಾರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯ 104 ಗ್ರಾ.ಪಂ. ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದ ಸಂವಾದ ಕಾರ್ಯ ಕ್ರಮವನ್ನು ನಡೆಸಿ ಸಂಘಟನೆಯನ್ನು ಬಲಪಡಿಸಲಾಗುª Àದೆಂದು ತಿಳಿಸಿದರು.