ವೀರಾಜಪೇಟೆ, ಫೆ. 14: ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಇತ್ತೀಚೆಗೆ ಕಾವೇರಿ ಪದವಿ ಹಾಗೂ ಪದವಿಪೂರ್ವ ಕಾಲೇಜು, ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಹಾಗೂ ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಮತ್ತು ರಕ್ತ ಗುಂಪು ವರ್ಗೀಕರಣ ಶಿಬಿರವನ್ನು ಏರ್ಪಡಿಸಲಾಗಿತ್ತು.

ಜಿಲ್ಲಾ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಕಾರ್ಯಕ್ರಮ ಉದ್ಛಾಟಿಸಿ ಮಾತನಾಡಿ, ರಕ್ತದಾನದ ಮಹತ್ವ ಹಾಗೂ ರಕ್ತದಾನದ ಮೂಲಕ ಜೀವವನ್ನು ಹೇಗೆ ರಕ್ಷಿಸಬಹುದೆಂದು ತಿಳಿಸಿದರು. ಜಿಲ್ಲಾ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ಡಿ.ಎನ್. ನಾಗಲಕ್ಷ್ಮಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿ ರಕ್ತದ ವರ್ಗದಲ್ಲಿ ಎರಡು ಗುಂಪುಗಳಿವೆ. ರಕ್ತದಾನ ಮಾಡಲು ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಸಿ.ಎಂ. ನಾಚಪ್ಪ ವಹಿಸಿದ್ದರು. ರೆಡ್ ಕ್ರಾಸ್ ಅಧಿಕಾರಿ ಐ.ಎಂ. ಸೋಮಣ್ಣ, ರೆಡ್ ರಿಬ್ಬನ್ ಹಾಗೂ ಎನ್.ಎಸ್.ಎಸ್. ಅಧಿಕಾರಿಯಾದ ಬಿ.ಯು. ಅಂಬಿಕಾ, ನಾಗರಾಜು ಹಾಗೂ ಪದವಿಪೂರ್ವ ಎನ್.ಎಸ್.ಎಸ್. ಅಧಿಕಾರಿ ದೇಚಮ್ಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ 33 ಮಂದಿ ರಕ್ತದಾನ ಮಾಡಿದರು.