ರುವ ಸಚಿವರ ಕಚೇರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ತೆರಳಿದ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ತಂಡ, ವಿವಿಧ ಕಾಮಗಾರಿಗಳಿಗೆ ಸರ್ಕಾರದಿಂದ ಒಟ್ಟು ರೂ. 14.80 ಕೋಟಿ ಅನುದಾನ ಒದಗಿಸುವಂತೆ ಮನವಿ ಮಾಡಿದೆ.
ಈಗಿರುವ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಿ ಕೆಳಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ಕಾಮಗಾರಿಗೆ ರೂ. 3 ಕೋಟಿ, ನೀರು ಶುದ್ದೀಕರಣ ಘಟಕ ನವೀಕರಣಕ್ಕೆ ರೂ. 90 ಲಕ್ಷ, ವಾಜಪೇಯಿ ವಸತಿ ಯೋಜನೆಯಡಿ ನಿವೇಶನ ನೀಡಿರುವ ಹೊಸ ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ರೂ. 1.50 ಕೋಟಿ, ಆನೆಕೆರೆ ಅಭಿವೃದ್ಧಿಗೆ ರೂ. 98 ಲಕ್ಷ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ರೂ. 5 ಕೋಟಿ, ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಳಿಸಲು ರೂ. 98 ಲಕ್ಷ, ಸುಸಜ್ಜಿತ ಮೀನು ಶುದ್ಧೀಕರಣ ಹಾಗೂ ಮಾರಾಟ ಘಟಕ ನಿರ್ಮಾಣಕ್ಕೆ ರೂ. 2.50 ಕೋಟಿ ಅನುದಾನ ನೀಡುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲ, ಸದಸ್ಯರುಗಳಾದ ಬಿ.ಎಂ. ಸುರೇಶ್, ಸುಷ್ಮಾ, ಲೀಲಾ ನಿರ್ವಾಣಿ, ಈಶ್ವರ್, ನಾಮನಿರ್ದೇಶಿತ ಸದಸ್ಯ ಇಂದ್ರೇಶ್, ಪ.ಪಂ. ಅಭಿಯಂತರ ವೀರೇಂದ್ರ ಅವರುಗಳನ್ನು ಒಳಗೊಂಡ ನಿಯೋಗದಿಂದ ಮನವಿ ಸ್ವೀಕರಿಸಿದ ಸಚಿವ ಈಶ್ವರ್ ಖಂಡ್ರೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ತಿಳಿಸಿದ್ದಾರೆ.