ಕೂಡಿಗೆ, ಫೆ. 14: ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಪರಿಸರಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ‘ಪರಿಸರ ಮಿತ್ರ’ ಶಾಲಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕರು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಹೇಳಿದರು.

ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್‍ನ ಎನ್.ಎಸ್.ಎಸ್ ಘಟಕದ ವತಿಯಿಂದ ಸಮೀಪದ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಪರಿಸರ ಸಂರಕ್ಷಣೆಯಲ್ಲಿ ಯುವಜನರ ಪಾತ್ರ’ ಕುರಿತು ಅವರು ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪಾಲಿಟೆಕ್ನಿಕ್‍ನ ಉಪನ್ಯಾಸಕ ಕೆ.ವಿ.ಉದಯ್ ಮಾತನಾಡಿದರು.

ಪಾಲಿಟೆಕ್ನಿಕ್‍ನ ಕಾಲೇಜಿನ ಪ್ರಾಂಶುಪಾಲ ಎಚ್.ವಿ.ಶಿವಪ್ಪ, ಕುಶಾಲನಗರದ ಉದ್ಯಮಿ ಶಶಾಂಕಭಟ್, ಎನ್‍ಎಸ್‍ಎಸ್ ಅಧಿಕಾರಿಗಳಾದ ಪ್ರಕಾಶ್ ಕಂಬಾರ್, ಎಚ್.ಜಿ.ಮಂಜುನಾಥ್, ಉಪನ್ಯಾಸಕ ರೂಪಕುಮಾರ್, ಎಸ್‍ಡಿಎಂಸಿ ಸದಸ್ಯರಾದ ಶಿವಣ್ಣ, ಹಜಿಫೀರ್ ಇದ್ದರು. ಶಿಬಿರಾರ್ಥಿ ಯುಕ್ತಿಕುಮಾರ್ ನಿರೂಪಿಸಿದರು. ಶಿಬಿರಾರ್ಥಿ ರಾಜು ಸ್ವಾಗತಿಸಿದರು. ಜಿ.ಟಿ. ನಿಖಿಲ್ ವಂದಿಸಿದರು.