ಮಡಿಕೇರಿ, ಫೆ. 14: ರಾಯಲ್ ಬ್ರದರ್ಸ್ ಸಂಸ್ಥೆ ಬಾಡಿಗೆಗೆ ಬೈಕ್‍ಗಳ ಸೇವೆಯನ್ನು ಆರಂಭಿಸಿರುವದನ್ನು ವಿರೋಧಿಸಿ ಆಟೋ ಮಾಲೀಕರ ಹಾಗೂ ಚಾಲಕರ ಸಂಘ ಮತ್ತು ಕಾವೇರಿ ಡ್ರೈವರ್ಸ್ ಅಸೋಸಿಯೇಷನ್ ತಾ. 15 ರಂದು (ಇಂದು) ನಡೆಸುತ್ತಿರುವ ಪ್ರತಿಭಟನೆಗೆ ಲಾರಿ ಮಾಲೀಕರ ಮತ್ತು ಚಾಲಕರ ಸಂಘ ಬೆಂಬಲ ಸೂಚಿಸಿದೆ ಎಂದು ಸಂಘದ ಅಧ್ಯಕ್ಷರಾದ ಕೆ.ಕೆ. ಶಿವ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ಲಾರಿ ಚಾಲಕರು ಭಾಗವಹಿಸಲಿದ್ದು, ಲಾರಿಗಳ ಓಡಾಟ ಎಂದಿನಂತೆ ಇರಲಿದೆ ಎಂದು ಕೆ.ಕೆ. ಶಿವ ಸ್ಪಷ್ಟಪಡಿಸಿದ್ದಾರೆ.