ವೀರಾಜಪೇಟೆ, ಫೆ. 14: ವೀರಾಜಪೇಟೆಯಿಂದ ಹೆಗ್ಗಳÀ ಬೂದಿಮಾಳದ ಮೂಲಕ ಕರಡಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಕಳಪೆ ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ರಸ್ತೆ ಸರಿಪಡಿಸಲು ಜಿಲ್ಲಾಡಳಿತಕ್ಕೆ 7 ದಿನಗಳ ಕಾಲಾವಕಾಶ ನೀಡಲಾಗಿದ್ದು, ಇಲ್ಲವಾದರೆ ವೀರಾಜಪೇಟೆ-ಕೇರಳ ಮುಖ್ಯ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಲಾಗುವದು ಎಂದು ಗ್ರಾಮಸ್ಥರ ಪರವಾಗಿ ಕೆ.ಕೆ. ಮನೋಹರ್ ತಿಳಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಬೇಟೋಳಿ ಗ್ರಾ. ಪಂ. ಸದಸ್ಯ ಬಿ.ಸಿ. ನಾರಾಯಣ್, ಜತ್ತಪ್ಪ, ಪೊಕ್ಕುಳಂಡ್ರ ಚೇತನ್, ನಾರಾಯಣ್ ಸೇರಿದಂತೆ ವಿವಿಧ ಗ್ರಾಮಗಳ ಪ್ರಮುಖರು ಭಾಗವಹಿಸಿದ್ದರು.