ಶನಿವಾರಸಂತೆ, ಫೆ. 14: ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ದುಂಡಳ್ಳಿ ಗ್ರಾ. ಪಂ. ವತಿಯಿಂದ ಶನಿವಾರಸಂತೆ ಪೊಲೀಸ್ ಠಾಣೆಗೆ ಎರಡು ಬ್ಯಾರಿಕೇಡ್‍ಗಳನ್ನು ಕೊಡುಗೆಯಾಗಿ ನೀಡಲಾಯಿತು.

ನಂತರ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ವಹಿಸಿದ್ದರು. ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಪಂಚಾಯಿತಿ ಸದಸ್ಯರಾದ ಎನ್.ಕೆ. ಸುಮತಿ, ಮನು ಹರೀಶ್, ಪಾರ್ವತಮ್ಮ, ನೇತ್ರಾವತಿ, ಬಿಂದಮ್ಮ, ರಕ್ಷಿತ್, ಸಂತೋಷ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.