ಕೂಡಿಗೆ, ಫೆ. 14: ವಿದ್ಯಾರ್ಥಿಗಳು ವಿದ್ಯೆಯಿಂದ ವಿನಯತೆಯನ್ನು ಕಲಿಯಬೇಕು. ಆ ವಿನಯತೆಯೆ ಅವರ ಭವಿಷ್ಯ ಉಜ್ವಲವಾಗಲು ಕಾರಣವಾಗುತ್ತದೆ ಎಂದು ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಹೇಳಿದರು.

ಶಿರಂಗಾಲ ಪದವಿಪೂವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಉತ್ತಮ ಗ್ರಂಥಗಳು ವಿದ್ಯಾರ್ಥಿಗಳನ್ನು ತಲೆ ಎತ್ತಿ ಮುನ್ನಡೆಸಿದರೆ, ಮೊಬೈಲ್‍ಗಳು ಜೀವನದಲ್ಲಿ ತಲೆ ಎತ್ತದಂತೆ ಮಾಡುತ್ತವೆ. ಹಾಗಾಗಿ ಪರೀಕ್ಷಾ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಿತವಾಗಿರಬೇಕು ಎಂದು ಸಲಹೆ ನೀಡಿದರು.

ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕ ಸೋಮಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಎಂ.ಆರ್. ಸುರೇಶ್‍ಕುಮಾರ್ ವಹಿಸಿದ್ದರು. ಉಪನ್ಯಾಸಕರಾದ ಎಸ್.ಆರ್. ವೆಂಕಟೇಶ್, ಹೆಚ್.ಆರ್. ಶಿವಕುಮಾರ್, ಆದರ್ಶ ಮಾತನಾಡಿದರು.