ಮಡಿಕೇರಿ, ಫೆ. 15: ಕಿರುಗೂರು ಗ್ರಾ.ಪಂ. ಉಪ ಚುನಾವಣೆಯ ಕೌತುಕಕ್ಕೆ ಇಂದು ತೆರೆಬಿದ್ದಿದೆ. ಪ್ರತಿಷ್ಠೆಯ ಚುನಾವಣೆಯಾಗಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಲೆಮಾಡ ಡಿ. ಸುಧೀರ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಕೋದೇಂಗಡ ಬಿ. ನಾಣಯ್ಯ (ಶಂಭು) ಅವರನ್ನು ಪರಾಜಿತಗೊಳಿಸುವ ಮೂಲಕ ಬಿಜೆಪಿಯ ಹಿಡಿತದಲ್ಲಿದ್ದ ಸ್ಥಾನವನ್ನು ಮತ್ತೆ ಉಳಿಸಿದ್ದಾರೆ.
ಕಿರುಗೂರು ಕ್ಷೇತ್ರದ ಸದಸ್ಯರಾಗಿದ್ದ ಚೆಪ್ಪುಡಿರ ದಿನು ಕಿಶೋರ್ ಅವರು ಅಕಾಲಿಕವಾಗಿ ನಿಧನರಾಗಿದ್ದು, ಈ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ತಾ. 12 ರಂದು ಮತದಾನ ನಡೆದಿದ್ದು, ಈ ಉಪ ಚುನಾವಣೆ ಕಿರುಗೂರು ಮಾತ್ರವಲ್ಲದೆ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ತೀವ್ರ ಕುತೂಹಲ ಸೃಷ್ಟಿಸಿತ್ತು.
ಒಟ್ಟು 978 ಮತ ಚಲಾವಣೆ ಯಾಗಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಲೆಮಾಡ ಸುಧೀರ್ 621 ಮತಗಳಿಸಿದರೆ, ಕಾಂಗ್ರೆಸ್ ಬೆಂಬಲಿತ ಕೋದೇಂಗಡ ಬಿ. ನಾಣಯ್ಯ (ಶಂಭು) ಅವರಿಗೆ 345 ಮತ ಲಭ್ಯವಾಗಿದೆ. 12 ಮತಗಳು ತಿರಸ್ಕøತಗೊಂಡಿವೆ.
ತಾ. 12 ರಂದು ನಡೆದ ಚುನಾವಣೆಯ ಮತ ಎಣಿಕೆ ಇಂದು ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಉಸ್ತುವಾರಿಯಲ್ಲಿ ನಡೆಯಿತು. ಚುನಾವಣಾದಿ üಕಾರಿಯಾಗಿ ಕುಪ್ಪನಗರ ಬಸಪ್ಪ ಕಾರ್ಯನಿರ್ವಹಿಸಿದರು. ಗೆಲುವಿನ ಬಳಿಕ ಬಿಜೆಪಿ ಕಾರ್ಯಕರ್ತರು, ಸುಧೀರ್ ಸ್ನೇಹಿತರು ಸಂಭ್ರಮಾಚರಣೆ ಮಾಡಿದರು.