ಮಡಿಕೇರಿ, ಫೆ. 15: ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವಾತಾವರಣದ ಏರಿಳಿತ ಅನುಭವಿಸಿದ ಬ್ರೆಜಿಲ್ ಹೆಚ್ಚಿನ ರೋಬಸ್ಟಾ ಕಾಫಿಯನ್ನು ಆಮದು ಮಾಡಿಕೊಳ್ಳಲು ತೀರ್ಮಾನಿಸಿದೆ.

ಮೇ 17ರವರೆಗೆ ಅರವತ್ತು ಕೆ.ಜಿ.ಯ ಸುಮಾರು ಒಂದು ಮಿಲಿಯ ಚೀಲದಷ್ಟು ಕಾಫಿ ಆಮದು ಮಾಡಿಕೊಳ್ಳಲು ಅಲ್ಲಿನ ಕೃಷಿ ಸಚಿವ ಬ್ಲೇರೊ ಮ್ಯಾಗಿ ತೀರ್ಮಾನಿಸಿದ್ದು, ಭಾರತ ಹಾಗೂ ಎಲ್ಲೆಡೆ ರೋಬಸ್ಟಾ ಕಾಫಿಯ ಬೆಲೆಯಲ್ಲಿ ಚೇತರಿಕೆ ಕಾಣಲಿದೆ.