ಗೋಣಿಕೊಪ್ಪಲು, ಫೆ. 16: ಟ್ರಯಲ್‍ಗೆಂದು ಕೊಂಡೊಯ್ದಿದ್ದ ಕಾರನ್ನು ಪಟ್ಟಣದ ಪೊಲೀಸ್ ಠಾಣೆ ಸಮೀಪ ಬಿಟ್ಟು ಅಪರಿಚಿತರು ಪರಾರಿಯಾಗಿದ್ದು, ಪತ್ತೆಯಾಗಿರುವ ಕಾರನ್ನು ಮಾಲೀಕರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸೋಮವಾರ ಇಲ್ಲಿನ ಏಳುಮಲೈ ಎಂಬವರಿಗೆ ಸೇರಿದ ಎಸ್ಟೀಂ ಕಾರನ್ನು ಮೂವರು ಯುವಕರ ತಂಡ ಟ್ರಯಲ್‍ಗೆಂದು ಕೊಂಡೊಯ್ದು ಹಿಂತಿರುಗಿಸಿರಲಿಲ್ಲ. ರಾತ್ರಿ ಪೊಲೀಸ್ ಠಾಣೆಯ ಸಮೀಪವಿರುವ ನೀರಿನ ಟ್ಯಾಂಕ್ ಸಮೀಪ ಕಾರು ಪತ್ತೆಯಾಗಿದ್ದು, ಕಾರ್‍ನಲ್ಲಿದ್ದ ದಾಖಲಾತಿಗಳು ನಾಪತ್ತೆಯಾಗಿವೆ ಎಂದು ಏಳುಮಲೈ ತಿಳಿಸಿದ್ದಾರೆ.