ಸೋಮವಾರಪೇಟೆ, ಫೆ. 16: ಭಾಜಪಾ ಯುವ ಮೋರ್ಚಾದ ನೇರುಗಳಲೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಧ್ಯಕ್ಷರಾಗಿ ಅಬ್ಬೂರುಕಟ್ಟೆಯ ಎನ್. ಪ್ರದೀಪ್, ಪ್ರಧಾನ ಕಾರ್ಯದರ್ಶಿಯಾಗಿ ನೇಗಳ್ಳಿಯ ಎನ್.ಜಿ. ವಿಕ್ರಮ್ ಆಯ್ಕೆಯಾದರು. ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಡಿ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಉಪಾಧ್ಯಕ್ಷರುಗಳಾಗಿ ಹೊಸಳ್ಳಿಯ ಬೋಜೇಗೌಡ, ಮಸಗೋಡು ಸಚಿನ್, ಕಾರ್ಯದರ್ಶಿಗಳಾಗಿ ತಣ್ಣೀರುಹಳ್ಳದ ಟಿ.ಎ. ಪ್ರವೀಣ್, ಅರೆಯೂರಿನ ಎಂ.ಎನ್. ಕಿರಣ್ ಹಾಗೂ ಸಮಿತಿ ಸದಸ್ಯರುಗಳಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 25 ಮಂದಿ ಸದಸ್ಯರುಗಳನ್ನು ನೇಮಕ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಪಕ್ಷದ ಪ್ರಮುಖರುಗಳಾದ ಮಹೇಶ್ ತಿಮ್ಮಯ್ಯ, ಪಿ.ಡಿ. ಮೋಹನ್‍ದಾಸ್, ಎ.ಹೆಚ್. ತಿಮ್ಮಯ್ಯ ಸೇರಿದಂತೆ ಇತರರು ಹಾಜರಿದ್ದರು.