ಮಡಿಕೇರಿ, ಫೆ. 16 : ಕಾಫಿ ಸಾಗುವಳಿ ಮಾಡಿದ ಜಾಗಕ್ಕೆ ಸಂಬಂಧಿಸಿದಂತೆ ಆರ್ಟಿಸಿ ನೀಡಲು ಕಂದಾಯ ಇಲಾಖೆ ಸುಮಾರು 34 ವರ್ಷಗಳ ಕಾಲ ನಿರಂತರ ಸತಾಯಿಸಿದ ಪ್ರಸಂಗವನ್ನು ಬಿಚ್ಚಿಟ್ಟಿರುವ ನಾಪೋಕ್ಲು ಗ್ರಾಮದ ಬೆಳೆÉಗಾರರಾದ ಕುಲ್ಲೇಟಿರ ಜಿ. ನಾಣಯ್ಯ, ಜಿಲ್ಲಾಡಳಿತ ಗ್ರಾಮ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಸುವ ಮೂಲಕ ಕಡತಗಳ ಶೀಘ್ರ ವಿಲೆÉೀವಾರಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಟುಂಬದ ಆಸ್ತಿಯಿಂದ ನನ್ನ ಅನುಭವ ಸ್ವಾಧೀನದಲ್ಲಿರುವ ಅಂದಾಜು 1.5 ಏಕರೆ ಸಾಗುವಳಿ ಮಾಡಿದ ಭೂಮಿಯನ್ನು ಸರ್ವೇ ಮಾಡಿ, ದುರಸ್ತಿ ಮತ್ತು ಕಂದಾಯಕ್ಕೆ ಒಳಪಡಿಸಿ, ಆರ್ಟಿಸಿ ಮಾಡಿಕೊಡಬೇಕೆಂದು ಸೂಕ್ತ ದಾಖಲಾತಿಗಳೊಂದಿಗೆ 1982 ಸೆ.10 ರಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ನಿರಂತರವಾಗಿ ಕಚೇರಿಗೆ ಬಂದು ಹೋದರೂ ಯಾವದೇ ಕಾರಣ ನೀಡದ ಅಧಿಕಾರಿಗಳು ಸತಾಯಿಸುತ್ತಿದ್ದರೆ ಹೊರತು ಅರ್ಜಿ ವಿಲೆÉೀವಾರಿ ಮಾಡುತ್ತಿರಲಿಲ್ಲ ಎಂದರು.
ಕಂದಾಯ ಇಲಾಖೆಯಲ್ಲಿನ ನ್ಯೂನತೆಗಳ ಅರಿವು ತಮಗೆ ಬರುವಲ್ಲಿಯವರೆಗೆ ಅಲೆದಾಡಿದ್ದು, ಕಡತ ವಿಲೆÉೀವಾರಿ ಪಡಿಸಿಕೊಳ್ಳುವ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ಬೆÉೀಸರಗೊಂಡಿದ್ದ ಪೋಷಕರು ಸಲಹೆ ನೀಡಿದ್ದರೂ ಹೋರಾಟವನ್ನು ಕೈಬಿಡಲಿಲ್ಲ. ಲಂಚವನ್ನು ನೀಡದೆ ನಿರಂತರವಾಗಿ ದೂರು ದುಮ್ಮಾನಗಳ ಮೂಲಕ ಜಿಲ್ಲಾಡಳಿತದ ಗಮನವನ್ನು 34 ವರ್ಷಗಳ ಕಾಲ ಸೆಳೆಯುತ್ತಾ ಬಂದಿದ್ದು, 2016 ಜುಲೈ 20 ರಂದು ನಾಪೋಕ್ಲುವಿನಲ್ಲಿ ನಡೆದ ಕಂದಾಯ ಅದಾಲತ್ನಲ್ಲಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೆ. ಕೇವಲ 1.50 ಏಕರೆ ಜಾಗಕ್ಕೆ ಸುಮಾರು 90ಕ್ಕೂ ಅಧಿಕ ದಾಖಲೆಗಳ ಕ್ರೋಢೀಕರಣ ಮಾಡಿಕೊಳ್ಳಬೇಕಾದ ದುಸ್ಥಿತಿ ಬಂದ ನಂತರ 2017 ಜನವರಿಯಲ್ಲಿ ಆರ್ಟಿಸಿ ಲಭಿಸಿದೆ.
ತಮ್ಮ ಪ್ರಕರಣ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಈ ರೀತಿಯ ಪರಿಸ್ಥಿತಿ ಯಾರಿಗೂ ಎದುರಾಗಬಾರದೆಂದರು. ಜಿಲ್ಲಾಡಳಿತ ಪ್ರತಿ ಗ್ರಾಮಗಳಲ್ಲಿ ಕಂದಾಯ ಅದಾಲತ್ಗಳನ್ನು ನಡೆಸಬೇಕೆಂದು ತಿಳಿಸಿದರು. 2011 ರಲ್ಲಿ ತಾವು ಮತ್ತೊಂದು ಜಾಗಕ್ಕೆ ಸಂಬಂಧಿಸಿದ ಅರ್ಜಿ ಸಲ್ಲಿಸಿದ್ದು, ಇಲ್ಲಿಯವರೆಗೆ ವಿಲೇವಾರಿಯಾಗಿಲ್ಲ. ಈ ಕಡತಕ್ಕೂ 34 ವರ್ಷಗಳು ಬೆÉೀಕಾಗಬಹುದೆಂದು ಬೇಸರ ವ್ಯಕ್ತಪಡಿಸಿದ ಅವರು, ಕಂದಾಯ ಕಛೇರಿಗಳಲ್ಲಿ ಹಿರಿಯ ಅರ್ಜಿ ದಾರರಿಗೆ ಗೌರವ ಸಿಗುತ್ತಿಲ್ಲವೆಂದರು. ತಕ್ಷಣ ಜಿಲ್ಲಾಡಳಿತ ಕಂದಾಯ ಇಲಾಖೆಯ ನ್ಯೂನತೆಗಳನ್ನು ಸರಿಪಡಿಸಿ ಕಾನೂನು ಬದ್ಧ ಅರ್ಜಿಗಳನ್ನು ನ್ಯಾಯಯುತವಾಗಿ ವಿಲೇವಾರಿಯಾಗಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.