ನಾಪೆÇೀಕ್ಲು, ಫೆ. 16 : ದಿಡ್ಡಳ್ಳಿ ನಿರಾಶ್ರಿತರಿಗೆ ಜಿಲ್ಲಾಡಳಿತ ಮನೆ ನಿರ್ಮಿಸಲು ಜಾಗ ಗುರುತಿಸಿದ್ದು ಫಲನುಭವಿಗಳಿಗೆ ಜಾಗವನ್ನು ಲಾಟರಿ ಮೂಲಕ ನೀಡಲು ಕ್ರಮ ಕೈಗೊಂಡಿದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಹೇಳಿದರು. ಅವರು ಕೊಡಗಿನ ಕುಲ ದೇವ ಇಗ್ಗುತ್ತಪ್ಪ ದೇವಾಲಯದ ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ಮಾಡಲು ಸುಮಾರು 2.85 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಪತ್ರಕರ್ತ ರೊಂದಿಗೆ ಮಾತನಾಡಿದರು. ರಾಜ್ಯ ಸರಕಾರ ದಿಡ್ಡಳ್ಳಿ ನಿರಾಶ್ರಿತರ ಬಗ್ಗೆ ಈಗಾಗಲೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಕೈಗೊಂಡಿದ್ದರೂ ಕೆಲವರ ಮಾತುಗಳಿಂದ ಅಲ್ಲಿನವರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದ ಅವರು ರಾಜ್ಯದಲ್ಲಿ ಯಾರಿಗೂ ಅರಣ್ಯ ಜಾಗವನ್ನು ನೀಡಲು ಬರುವದಿಲ್ಲ. ಅರಣ್ಯ ಭೂಮಿ ನೀಡಿದರೆ ಮಂತ್ರಿಗಳು, ಸರಕಾರ, ಆಡಳಿತ ವರ್ಗ ಜೈಲಿಗೆ ಹೋಗಬೇಕಾಗುತ್ತದೆ ಎಂದರು. ಯಾರ ಸುಳ್ಳು ಭರವಸೆಗೂ ಇಲ್ಲ್ಲಿ ಆಸ್ಪದ ಇಲ.್ಲ ಈ ಬಗ್ಗೆ ಗಿರಿಜನ ನಾಯಕರನ್ನು ಕರೆಸಿ ಪರಿಶೀಲಿಸಲಾಗಿದೆ ಎಂದರು.
ಕಕ್ಕಬ್ಬೆ ಸಮೀಪದ ತಾಮರ ಪಕ್ಕದಲ್ಲಿ ವಾಸವಾಗಿರುವ ಗಿರಿಜನರ ಸಮಸ್ಯೆಯನ್ನು ಗ್ರಾಮಸ್ಥರು ಮಂತ್ರಿಗಳ ಗಮನಕ್ಕೆ ತಂದಾಗ ಕಂದಾಯ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದ ಸಚಿವರು ದಾರಿಯ ಸಮಸ್ಯೆ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳಲು ಸೂಚಿಸಿದರು.
(ಮೊದಲ ಪುಟದಿಂದ) ಮುಂದೆ ಇವರಿಗೆ ಯಾವದೇ ಸಮಸ್ಯೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ರಸ್ತೆ ಅಭಿವೃದ್ಧಿಗಾಗಿ ಈಗಾಗಲೇ ಸುಮಾರು 3.45 ಕೋಟಿ ಮಲೆನಾಡು ಅಭಿವೃದ್ಧಿ ನಿಗಮದಿಂದ ಹಣ ಮಂಜೂರಾಗಿದ್ದು, ಸರಕಾರದ ಅನುದಾನ ಸೇರಿಸಿ ಕುಲ ದೇವ ಇಗ್ಗುತ್ತಪ್ಪ ದೇವಾಲಯ ರಸ್ತೆಗೆ ಕಾಂಕ್ರೀಟ್ ಹಾಕಲು 2.85 ಕೋಟಿ, ಬೇತು ಗ್ರಾಮದ ಮಕ್ಕಿ ದೇವಾಲಯ ರಸ್ತೆಗೆ ಡಾಮರೀಕರಣ ರೂ. 1.1 ಕೋಟಿ, ನಾಪೆÇೀಕ್ಲು ನಗರದಿಂದ ಬೇತು ಜಂಕ್ಷನ್ ರಸ್ತೆ ಡಾಮರೀಕರಣಕ್ಕೆ ರೂ. 40 ಲಕ್ಷ ಮೊದಲಾದ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್, ಕೊಡಗು ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಉಪ ವಿಭಾಗಾಧಿಕಾರಿ ನಂಜುಡೇಗೌಡ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ, ಮಾಜಿ ಎಂ.ಎಲ್.ಸಿ ಅರುಣ್ ಮಾಚಯ್ಯ, ಜಿಲ್ಲಾ ಪಂಚಾಯತ್ ಸದಸ್ಯೆ ಚಂದ್ರಕಲಾ, ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಪರದಂಡ ಕಾವೇರಪ್ಪ, ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ| ಸಣ್ಣುವಂಡ ಕಾವೇರಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ನಾಪೆÇೀಕ್ಲು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್. ಕಕ್ಕಬ್ಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ, ಬಾಚಮಂಡ ಲವ, ಕುಲ್ಲೇಟಿರ ಅರುಣ್ ಬೇಬ, ಬೊಪ್ಪಂಡ ಬೊಳ್ಳಮ್ಮ, ಅರೆಯಡ ಸೋಮಪ್ಪ, ನಾಪೆÇೀಕ್ಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಳೆಯಂಡ ತಿಮ್ಮಯ್ಯ, ವಿ.ಪಿ. ಶಶೀಧರ್, ಕೆ.ಎಂ. ಲೋಕೇಶ್, ಮತ್ತಿತರ ಅಧಿಕಾರಿಗಳು ಇದ್ದರು.