ಸೋಮವಾರಪೇಟೆ, ಫೆ. 16: ಕೊಡಗು ಜಿಲ್ಲೆಯಲ್ಲಿ ವೀರಶೈವ ಸಮಾಜವನ್ನು ಇನ್ನಷ್ಟು ಒಗ್ಗೂಡಿಸುವ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ವೀರಶೈವ ಹಿತರಕ್ಷಣಾ ವೇದಿಕೆಯನ್ನು ಅಸ್ವಿತ್ವಕ್ಕೆ ತರಲು ಚಿಂತಿಸಲಾಗಿದ್ದು, ತಾ. 18 ರಂದು ಸೋಮವಾರಪೇಟೆಯ ಮಾನಸÀ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಸಮಾಜದ ಪ್ರಮುಖರಾದ ತಾ.ಪಂ. ಸದಸ್ಯ ಬಿ.ಎಸ್. ಅನಂತ್‍ಕುಮಾರ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಯಿಂದ ಹಿಂದೆ ಸರಿದಿರುವ ವೀರಶೈವ ಸಮುದಾಯದ ಮಂದಿಯನ್ನು ಸಾಮಾಜಿಕವಾಗಿ ಮೇಲೆತ್ತುವ ಪ್ರಯತ್ನವನ್ನು ಹಿತರಕ್ಷಣಾ ವೇದಿಕೆ ಮಾಡಲಿದೆ ಎಂದರು.
ವೀರಶೈವ ಸಮುದಾಯವನ್ನು ಒಗ್ಗೂಡಿಸುವ ಮೂಲಕ, ಇತರ ಸಮುದಾಯದ ಸಹಕಾರದೊಂದಿಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು. ಈಗಾಗಲೇ ಸಮುದಾಯದಲ್ಲಿ ಬೇರೆ ಬೇರೆ ಸಂಘಟನೆಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹಿತರಕ್ಷಣಾ ಸಮಿತಿಯು ಕಾರ್ಯಾಚರಿಸಲಿದೆ ಎಂದ ಅನಂತ್‍ಕುಮಾರ್, ಇದು ಸಮುದಾಯದ ಇನ್ನಿತರ ಯಾವದೇ ಸಂಘಟನೆಗೆ ಪರ್ಯಾಯವಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ರಹಿತವಾಗಿ ಹಿತ ರಕ್ಷಣಾ ಸಮಿತಿ ಕೆಲಸ ಮಾಡಲಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಬೇಕು. ಪ್ರತಿ ಗ್ರಾಮ, ಹೋಬಳಿ, ತಾಲೂಕು ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ಹಿತರಕ್ಷಣಾ ಸಮಿತಿಯ ಘಟಕಗಳನ್ನು ರಚಿಸಲಾಗುವದು. ಈ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ತಾ. 18 ರಂದು 11 ಗಂಟೆಗೆ ಮಾನಸ ಸಭಾಂಗಣದಲ್ಲಿ ಆಯೋಜಿಸಿರುವ ಸಭೆಗೆ ವೀರಶೈವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗೋಷ್ಠಿಯಲ್ಲಿದ್ದ ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ ಮನವಿ ಮಾಡಿದರು.
ಮೈಸೂರು ವಿಭಾಗ ವ್ಯಾಪ್ತಿಗೆ ಒಳಪಟ್ಟಿರುವ ಇತರ ಜಿಲ್ಲೆಗಳಲ್ಲಿ ಈಗಾಗಲೇ ಸಮಿತಿ ರಚಿಸಲಾಗಿದ್ದು, ಕೊಡಗು ಜಿಲ್ಲಾ ಘಟಕ ರಚನೆ ನಂತರ ರಾಜ್ಯಮಟ್ಟದಲ್ಲಿ ಸಂಘಟನೆಯನ್ನು ರಚಿಸಲಾಗುವದು. ತಾ. 18ರಂದು ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗುವದು. ಸಭೆಗೆ ರಾಜ್ಯ ಸಂಚಾಲಕರಾಗಿರುವ ಸಿ.ಪಿ. ತಮ್ಮಣ್ಣ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ವೀರಶೈವ ಸಮುದಾಯದ ಪ್ರಮುಖರಾದ ಅಜ್ಜಳ್ಳಿ ರವಿ,