*ಗೋಣಿಕೊಪ್ಪಲು, ಫೆ. 17: ಪಕ್ಷಿಗಳ ಜೀವನ ಕ್ರಮ ಮತ್ತು ಪಕ್ಷಿಗಳಿಂದ ರೈತರಿಗೆ ಸಹಾಯ ವಿಚಾರದ ಕುರಿತು ‘ಪಕ್ಷಿಗಳ ಸುಂದರ ಲೋಕ’ ಎಂಬ ಸ್ಲೈಡ್ ಶೋ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಜ್ಯ ಪ್ರಶಸ್ತಿ ವಿಜೇತ ಜೀವ ವಿಜ್ಞಾನ ಶಿಕ್ಷಕ ಡಿ. ಕೃಷ್ಣಚೈತನ್ಯ ಪಕ್ಷಿಗಳ ಬಗ್ಗೆ ತಿಳಿಸಿದರು.

ಭಾರತದ ಅತ್ಯಂತ ಸಣ್ಣ ಮತ್ತು ದೊಡ್ಡ ಪಕ್ಷಿ, ಸುಂದರವಾದ ಪಕ್ಷಿ, ಅವುಗಳ ಜೀವನಕ್ರಮ, ಜೀವಿತಾವಧಿ, ಮುಂತಾದ ಹಲವಾರು ವಿಷಯಗಳ ಜೊತೆಗೆ ಪಕ್ಷಿಗಳು ಮರಗಳಿಗೆ ಬರುವ ಹುಳು, ಕೀಟ, ತಿಗಣೆ, ಮತ್ತು ಹೇನುಗಳನ್ನು ಭಕ್ಷಿಸಿ ಮರಗಳನ್ನು ಕಾಪಾಡುತ್ತವೆ. ರೈತರ ಬೆಳೆಗಳಿಗೆ ಬರುವ ಮಿಡತೆ, ಹುಳುಗಳನ್ನು ತಿಂದು ಬೆಳೆ ರಕ್ಷಣೆ ಮಾಡುತ್ತವೆ.

ಆಲ್‍ಔಟ್, ಗುಡ್ ನೈಟ್ ಮತ್ತು ಕಾಯಿಲ್‍ಗಳನ್ನು ಬಳಸಿ ಅಸ್ತಮಾ, ಕ್ಯಾನ್ಸರ್ ಮುಂತಾದ ಕಾಯಿಲೆಗಳನ್ನು ತಂದುಕೊಳ್ಳುವ ಬದಲು ಮನೆಯ ಬಳಿ ಹಣ್ಣು, ತರಕಾರಿ ಗಿಡಗಳನ್ನು ಬೆಳೆಸಿ ಪಕ್ಷಿಗಳಿಗೆ ಆಶ್ರಯ ನೀಡಿದಲ್ಲಿ ಸ್ವಚ್ಛ ಪರಿಸರ, ಆರೋಗ್ಯ ಎರಡೂ ದೊರೆಯುತ್ತದೆ ಎಂದರು.

ಪಕ್ಷಿಗಳ ಸಂರಕ್ಷಣೆಗೆ ಪಣತೊಡುವ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕಾರ್ಯಕ್ರಮದ ಸಂಚಾಲಕಿ ಶ್ರೀಜಾ ಸ್ವಾಗತಿಸಿದರು.