ಗೋಣಿಕೊಪ್ಪಲು, ಫೆ. 17: ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದÀರ್ಭದಲ್ಲಿ ಜರುಗಿದ ಎನ್‍ಸಿಸಿಯ ನೇವಿ ವಿಭಾಗದ ಶಿಪ್ ಮೋಡೆಲಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಪ್ರತಿನಿಧಿಸಿದ್ದ ವೀರಾಜಪೇಟೆಯ ಹೊಟೇಲ್ ಉದ್ಯಮಿ ಗಾಯತ್ರಿ ಭವನದ ಆರ್ ಶ್ರೀನಿವಾಸ್ ಶೆಣೈ ಮತ್ತು ಚಂದ್ರಿಕಾ ಶೆಣೈ ದಂಪತಿಗಳ ಹಿರಿಯ ಪುತ್ರಿ. ದ್ಯಾರ್ಥಿನಿ ಆರ್ ಅಕ್ಷತಾ ಶೆಣೈ ಚಿನ್ನದ ಪದಕ ಗಳಿಸಿದ್ದಾರೆ. ಉಡುಪಿಯ ಟಿಕ್ಸ ಕರ್ನಾಟಕ ನೇವಲ್ ಯೂನಿಟ್‍ನಿಂದ ಕರ್ನಾಟಕ ಮತ್ತು ಗೋವಾ ರಾಜ್ಯವನ್ನು ಪ್ರತಿನಿಧಿಸಿದ ಆರು ವಿದ್ಯಾರ್ಥಿಗಳ ತಂಡದ ನಾಯಕಿಯಾಗಿ ಆರ್. ಅಕ್ಷತಾ ಕಾರ್ಯನಿರ್ವಹಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಮೂರು ವಿಧದ ನೌಕಾ ಮಾದರಿಗಳನ್ನು ನಿರ್ಮಿಸಿದ್ದು, ವಿಐಪಿ ಮೋಡೆಲ್, ಸೈಲಿಂಗ್ ಮೋಡೆಲ್ ಮತ್ತು ಕ್ಯಾಂಪ್ ಮೋಡೆಲ್‍ಗಳನ್ನು ರಚಿಸಿದ್ದು, ಇದರಲ್ಲಿ ಕ್ಯಾಂಪ್ ಮೋಡೆಲಿಗೆ ಚಿನ್ನದ ಪದಕ ಲಭಿಸಿದೆ.

2008ರ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಚಿನ್ನದ ಪದಕ ಲಭಿಸಿದೆ.