ಸಿದ್ದಾಪುರ, ಫೆ. 17: ಪ್ರಥಮ ವರ್ಷದ ಸ್ಮಾಶ್ ಶೆಟಲರ್ಸ್ ಡಬಲ್ಸ್ ಪ್ರಶಸ್ತಿಯನ್ನು ಸುಂಟಿಕೊಪ್ಪದ ಸಂತೋಷ್ ಹಾಗೂ ಪ್ರವೀಣ್ ಜೋಡಿ ತಮ್ಮದಾಗಿಸಿಕೊಂಡಿದ್ದಾರೆ. ಸಿದ್ದಾಪುರದ ಚರ್ಚ್ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಶೆಟಲ್ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ ಕುಶಾಲನಗರದ ಮುರಳಿ ಹಾಗೂ ಸದಾಯತ್ ಜೋಡಿಯನ್ನು ಮಣಿಸಿದ ಸುಂಟಿಕೊಪ್ಪ ತಂಡ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿತ್ತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾಜಿ ಜಿ.ಪಂ. ಸದಸ್ಯ ಹಾಗೂ ರೋಟರಿ ವಕೀಲ ಎಂ.ಎಸ್. ವೆಂಕಟೇಶ್, ಕ್ರೀಡೆ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ರೀತಿಯ ಪಂದ್ಯಾವಳಿಗಳು ಹಮ್ಮಿಕೊಳ್ಳುವದ ರಿಂದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆಯುವಂತಾಗುತ್ತಿದೆ ಎಂದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜೋಸೆಫ್ ಶ್ಯಾಂ, ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ರೆಜಿತ್ ಕುಮಾರ್, ನಾ ಕನ್ನಡಿಗ ಟೋಮಿ ಥೋಮಸ್, ಸ್ಮಾಶ್ ಶೆಟಲರ್ಸ್ನ ಡಿಜಿತ್, ಯೂಸುಫ್, ಥೋಮಸ್, ಸಿಯಾದ್, ಶಾಫಿ, ಅರ್ತಾಫ್, ಹ್ಯಾರೀಫ್, ರೀಗಲ್, ಶರತ್ ಇದ್ದರು.