ಕೂಡಿಗೆ, ಫೆ. 17: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಇತ್ತೀಚೆಗೆ ಶನಿವಾರಸಂತೆಯಲ್ಲಿ ನಡೆದಿದ್ದ ರಾಜ್ಯಮಟ್ಟದ 7ನೇ ಇಂಟರ್ ಡೋಜೋ ಕರಾಟೆ ಮತ್ತು ಯೋಗ ಸ್ಪರ್ಧೆಯಲ್ಲಿ ಯಡವನಾಡು ಡೋಜೋದ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಪಿ.ಎಸ್. ಲಯನ್, ಪಿ.ಎಸ್. ಯತೀನ್, ನಮೃತ್ ಅರಸ್, ಡಿ.ಎನ್. ಯೋಗೇಶ್, ಪಿ.ಎ. ದರ್ಶನ್, ಕೆ.ಜೆ. ಶ್ರವಣ್ ಹಾಗೂ ಪಿ.ಜೆ. ಭೀಮೇಶ್ ಇದ್ದ ತಂಡಕ್ಕೆ ಯಡವನಾಡಿನ ಚಂದ್ರು ತರಬೇತಿ ನೀಡಿದ್ದರು.