ಸೋಮವಾರಪೇಟೆ, ಫೆ. 17: ಕುಂದಾಪುರದ ಉಪ್ಪುಂದ ಚಕ್ರತೀರ್ಥ ಸಾಂಸ್ಕøತಿಕ ಕಲಾಕ್ರೀಡಾ ಸಂಘ ಆಯೋಜಿಸಿದ್ದ ರಾಜ್ಯಮಟ್ಟದ ಫಿಲ್ಮಿ ಡ್ಯಾನ್ಸ್ -2017 ಅವಾರ್ಡನ್ನು ಸೋಮವಾರ ಪೇಟೆಯ ಡ್ಯಾನ್ಸ್ ವಾರಿಯರ್ಸ್ ತಂಡ ಮುಡಿಗೇರಿಸಿಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದೆ.

ಉಪ್ಪುಂದದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ ಸೋಮವಾರ ಪೇಟೆಯ ತಂಡ ಅವಾರ್ಡ್ ನೊಂದಿಗೆ ರೂ. 50 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು.

ಸ್ಪರ್ಧೆಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‍ನಲ್ಲಿ ಪಾಲ್ಗೊಂಡಿದ್ದ ಅಯನ್ ತಂಡ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ 11 ತಂಡಗಳು ಪಾಲ್ಗೊಂಡಿದ್ದವು. ಇತ್ತೀಚೆಗೆ ಸೋಮವಾರಪೇಟೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಇದೇ ವಾರಿಯರ್ಸ್ ತಂಡ ಪ್ರಥಮ ಬಹುಮಾನವಾಗಿ ರೂ. 20 ಸಾವಿರ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದಿತ್ತು.

ತರಬೇತುದಾರರುಗಳಾದ ಪ್ರದೀಪ್, ಅಭಿಷೇಕ್, ಅಕ್ಕು ಹಾಗೂ ಹರೀಶ್‍ರವರುಗಳ ತರಬೇತಿಯಲ್ಲಿ ಪಳಗಿದ ತಂಡದಲ್ಲಿ ಬಾಲಕಿಯರಾದ ರಿಶಾ, ರುಚಿತ, ಸುಶ್ಮಿತಾ, ಅನುಷಾ, ಸ್ನೇಹಾ, ಭಾನುಪ್ರಿಯ ಸೇರಿದಂತೆ ಇತರ ಬಾಲಕರು ಇದ್ದರು.