ನಾಪೆÇೀಕ್ಲು, ಫೆ. 17: ಕಕ್ಕಬೆ ಮುಖ್ಯ ರಸ್ತೆಯಿಂದ ನಾಲಡಿ ರಸ್ತೆಯ ವಯಕೋಲ್ವರೆಗೆ ರಸ್ತೆ ಕಾಮಗಾರಿ ನಡೆಸದಿದ್ದರೆ ಕಕ್ಕಬೆ – ವೀರಾಜಪೇಟೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವದೆಂದು ಈ ವ್ಯಾಪ್ತಿಯ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಗ್ರಾಮಸ್ಥರಾದ ಪೆÇನ್ನೋಲತಂಡ ರಘು ಚಿಣ್ಣಪ್ಪ, ವಯಕೋಲ್ ಉಸ್ಮಾನ್, ಅಲ್ಲಾರಂಡ ಸುನ್ನು ಅಯ್ಯಪ್ಪ, ಹಂಸ ಮತ್ತಿತರರು ಕಕ್ಕಬೆ ಪಟ್ಟಣದಿಂದ ನಾಲಡಿ ಮೂಲಕ ವಯಕೋಲ್ವರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ನೂತನ ರಸ್ತೆ ನಿರ್ಮಿಸಲಾಗಿದೆ. ವಯಕೋಲ್ನಿಂದ ಕಕ್ಕಬೆ ಮುಖ್ಯ ರಸ್ತೆಯ ನೆಟ್ಟುಮಾಡುವಿಗೆ ಸಂಪರ್ಕ ಕಲ್ಪಿಸುವ 1.4 ಕಿ.ಮೀ ರಸ್ತೆ ಕಾಮಗಾರಿ ನಡೆಸದಿರುವ ಹಿನ್ನಲೆಯಲ್ಲಿ ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದೆ. ಈ ರಸ್ತೆ ಕಾಮಗಾರಿಗೆ ಆಗ್ರಹಿಸಿ ಒಂದು ವರ್ಷದ ಹಿಂದೆ ರಸ್ತೆ ತಡೆ ನಡೆಸಿದರೂ ಯಾವದೇ ಪ್ರಯೋಜನವಾಗಿಲ್ಲ. ಹಾಗೆಯೇ ಈ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಉದ್ಘಾಟಿಸಲು ಆಗಮಿಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರಿಗೂ ಮನವಿ ಸಲ್ಲಿಸಿದ ಸಂದರ್ಭ ಸಂಬಂಧಿಸಿದ ಇಂಜಿನಿಯರ್ಗೆ ಕೂಡಲೇ ಕಾಮಗಾರಿ ನಡೆಸುವಂತೆ ಸೂಚಿಸಿದ್ದರೂ ಕ್ರಮಕೈಗೊಂಡಿಲ್ಲ. ಮುಂದಿನ 10 ದಿನಗಳ ಒಳಗೆ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ದಿನ ಪೂರ್ತಿ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದ್ದಾರೆ.