ವೀರಾಜಪೇಟೆ, ಫೆ. 18: ಗ್ರಾಮಗಳ ಅಭಿವೃದ್ಧಿಯ ದೃಷ್ಟಿಯಿಂದ ಪಾಲೆಮಾಡು ಹೊದ್ದೂರು ಗ್ರಾಮದಲ್ಲಿ ಸರಕಾರ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ 12.7ಎಕರೆ ಜಾಗ ಮಂಜೂರು ಮಾಡಿರುವದನ್ನು ಗ್ರಾಮಸ್ಥರು ಸ್ವಾಗತಿಸಿದ್ದು ಈ ವಿಚಾರದಲ್ಲಿ ಕೆಲವರು ವೈಯಕ್ತಿಕ ಟೀಕೆ ಮಾಡುತ್ತಿರುವದು ದುರುದ್ದೇಶದಿಂದ ಕೂಡಿದೆ ಎಂದು ಗ್ರಾಮಸ್ಥರ ಪರವಾಗಿ ವಿ.ಟಿ. ನಾಣಯ್ಯ ತಿಳಿಸಿದ್ದಾರೆ.

ಪಾಲೆಮಾಡು ಗ್ರಾಮದ ಖಾಲಿ ಜಾಗದಲ್ಲಿ ಈ ಹಿಂದೆ ಗ್ರಾಮದ ಆಸಕ್ತರು ಜಾಗ ಖಾಲಿ ಇರುವೆಡೆಗಳಲ್ಲಿ ಸ್ಮಶಾನ ಜಾಗ ಎಂಬಂತೆ ಹೆಣ ಹೂಳುತ್ತಿದ್ದರು. ಈಗ ಜಿಲ್ಲಾಡಳಿತ ನವ ಗ್ರಾಮಕ್ಕಾಗಿ 4 ಎಕರೆ ಜಾಗ ಹಾಗೂ ಸ್ಮಶಾನಕ್ಕಾಗಿ ಎರಡು ಎಕರೆ ಜಾಗ ಮಂಜೂರು ಮಾಡಿರುವದನ್ನು ಬಳಸಿಕೊಳ್ಳಬಹುದು. ಆದರೆ ಗ್ರಾಮದ ಕೆಲವು ಸ್ವಹಿತಾಸಕ್ತರು ಸಮಾಜದ ಶಾಂತಿ ಕದಡುವ ನಿಟ್ಟಿನಲ್ಲಿ ಸರಕಾರದ ವಿರುದ್ಧವೇ ವೈಯಕ್ತಿಕ ಟೀಕೆ ಮಾಡಿ ಅನವಶ್ಯಕ ಗೊಂದಲಗಳನ್ನು ಸೃಷ್ಠಿಸುತ್ತಿರುವದು ಗ್ರಾಮಕ್ಕೆ ಒಳಿತಲ್ಲ ಎಂದು ನಾಣಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.