ಗೋಣಿಕೊಪ್ಪಲು, ಫೆ. 18: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ರೂ. 1.25 ಲಕ್ಷ ಜಂಟಿ ಅನುದಾನದಲ್ಲಿ ಇಲ್ಲಿನ 3ನೇ ವಾರ್ಡ್‍ನ ರಸ್ತೆ ಅಭಿವೃದ್ಧಿಗೆ ತಾ.ಪಂ. ಸದಸ್ಯೆ ಮೂಕಳೇರ ಆಶಾ ಪೂಣಚ್ಚ ಹಾಗೂ ಗ್ರಾ.ಪಂ. ಅಧ್ಯಕ್ಷೆ ಸುಮಿತಾ ಗಣೇಶ್ ಭೂಮಿಪೂಜೆ ನೆರವೇರಿಸಿದರು.

ತಾಲೂಕು ಪಂಚಾಯಿತಿಯ ರೂ. 75 ಸಾವಿರ ಹಾಗೂ ಗ್ರಾಮ ಪಂಚಾಯಿತಿಯ ರೂ. 50 ಸಾವಿರ ಹಣದಲ್ಲಿ ರಸ್ತೆ ಅಭಿವೃದ್ಧಿ ಪಡಿಸುವದಾಗಿ ಅವರು ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಮೂಕಳೇರ ಕಾವೇರಮ್ಮ, ಜಯಲಕ್ಷ್ಮಿ, ಪಿಡಿಓ ಅಬ್ದುಲ್ಲಾ ಹಾಗೂ ಗುತ್ತಿಗೆದಾರ ಮಂಜು ಇದ್ದರು.