ವೀರಾಜಪೇಟೆ, ಫೆ. 18: ಪಟ್ಟಣದ ಮಗ್ಗುಲದಲ್ಲಿರುವ ಶನೀಶ್ವರ ನವಗ್ರಹ ದೇವಾಲಯದಲ್ಲಿ ತಾ. 24 ರಂದು ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದ್ದಾರೆ.
ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವಂತೆ ಬೆಳಿಗ್ಗೆ 7 ಗಂಟೆಯಿಂದ ಪೂಜೆ ಪುನಸ್ಕಾರಗಳು ಆರಂಭಗೊಳ್ಳುತ್ತವೆ. ದೇವರಿಗೆ ರುದ್ರಾಭಿಷೇಕ, ಶಾಂತಿ ಪೂಜೆ, ಜಪಗಳು ನಡೆದ ಬಳಿಕ 11 ಗಂಟೆಯಿಂದ ನಾಗನಿಗೆ ಹಾಲು ಅಭಿಷೇಕ, ನಾಗ ತಂಬಿಲ ಸೇವೆ ಎಳನೀರು ಅಭಿಷೇಕ ಹಾಗೂ ಪೂಜೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ ಹಾಗೂ ಮಹಾ ಮಂಗಳಾರತಿ ನಡೆದ ಬಳಿಕ ತೀರ್ಥ ಪ್ರಸಾದ ವಿನಿಯೋಗ, ಹಾಗೂ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.