ಗೋಣಿಕೊಪ್ಪಲು, ಫೆ. 18: ಇಲ್ಲಿನ ಕಾವೇರಿ ಕಾಲೇಜು ಮೈದಾನದಲ್ಲಿ ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ 34 ನೇ ವರ್ಷದ ಚಿರಿಯಪಂಡ ಕುಶಾಲಪ್ಪ ಸ್ಮಾರಕ ಹಾಕಿ ಟೂರ್ನಿಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಹಾಗೂ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ತಂಡಗಳು ಫೈನಲ್ಗೆ ಪ್ರವೇಶ ಪಡೆದಿವೆ.
ಮೊದಲ ಸೆಮಿ ಫೈನಲ್ನಲ್ಲಿ ಕಾವೇರಿ ಕಾಲೇಜು ತಂಡವು ವೀರಾಜಪೇಟೆ ಸೆಂಟ್ ಆನ್ಸ್ ವಿರುದ್ಧ ಸಡನ್ ಡೆತ್ನಲ್ಲಿ 6-5 ಗೋಲುಗಳ ಗೆಲುವು ಪಡೆಯಿತು. ಉಭಯ ತಂಡಗಳು 1-1 ಗೋಲುಗಳ ಮೂಲಕ ಟೈ ಫಲಿತಾಂಶ ನೀಡಿತು. ಪೆನಾಲ್ಟಿ ಶೂಟೌಟ್ನಲ್ಲಿ 4-4 ಗೋಲುಗಳ ಡ್ರಾ ಸಾಧಿಸಿತು. ಸಡನ್ ಡೆತ್ನಲ್ಲಿ ಕಾವೇರಿ ಕಾಲೇಜು ಪರ ಬೋಪಣ್ಣ ಹೊಡೆದ ಗೋಲಿನಿಂದ ಗೆಲುವು ಪಡೆಯಿತು.ಕಾವೇರಿ ಕಾಲೇಜು ಪರ ಅವಿನಾಶ್ ಹಾಗೂ ಶ್ಯಾನ್ ಬೋಪಣ್ಣ ತಲಾ 2 ಗೋಲು ಹೊಡೆದರು. ವಿಘ್ನೇಶ್ ಹಾಗೂ ಬೋಪಣ್ಣ ತಲಾ ಒಂದೊಂದು ಗೋಲು ಹೊಡೆದರು. ಸೆಂಟ್ ಆನ್ಸ್ ಪರ ಅಜಿತ್ ಹಾಗೂ ಆದರ್ಶ್ ತಲಾ 2, ಪ್ರಜ್ವಲ್ 1 ಗೋಲು ಹೊಡೆದರು.
ಎರಡನೇ ಸೆಮಿಯಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಕಾವೇರಿ ಕಾಲೇಜು ತಂಡವನ್ನು ಶೂಟೌಟ್ನಲ್ಲಿ ಮಣಿಸಿತು. ಶೂಟೌಟ್ನಲ್ಲಿ ಮೂರ್ನಾಡು ತಂಡವು 4-3 ಗೋಲುಗಳ ಗೆಲವು ದಕ್ಕಿಸಿಕೊಂಡಿತು. 2-2 ಸಮಬಲ ಸಾಧಿಸಿತ್ತು.
ಕ್ವಾರ್ಟರ್ ಫೈನಲ್ನಲ್ಲಿ ಸೆಂಟ್ ಆನ್ಸ್ ತಂಡವು ಫಿಲೋಮಿನಾಸ್ ತಂಡವನ್ನು 1-0 ಗೋಲುಗಳಿಂದ ಮಣಿಸಿ ಸೆಮಿಗೆ ಪ್ರವೇಶ ಪಡೆದಿತ್ತು.್ರ ಅಜಿತ್ ಗೋಲು ಹೊಡೆದರು.
ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು ನಾಪೋಕ್ಲು ಪ್ರಥಮ ದರ್ಜೆ ಕಾಲೇಜು ತಂಡವನ್ನು 2-0 ಗೋಲುಗಳಿಂದ ಮಣಿಸಿತು. ಕಾವೇರಿ ಕಾಲೇಜು ಪರ ಬೋಪಣ್ಣ ಹಾಗೂ ಸಂದೇಶ್ ತಲಾ ಒಂದೊಂದು ಗೋಲು ಹೊಡೆದರು.
ವಿರಾಜಪೇಟೆ ಕಾವೇರಿ ಕಾಲೇಜು ತಂಡವು ಕೊಣಾಜೆ ಕ್ಯಾಂಪಸ್ ತಂಡವನ್ನು 3-0 ಗೋಲಿನಿಂದÀ ಮಣಿಸಿತು. ಕಾವೇರಿ ಕಾಲೇಜು ಪರ ಪೂವಯ್ಯ 2, ಸುಬ್ಬಯ್ಯ 1 ಗೋಲು ಹೊಡೆದರು.
ನೆರ್ಪಂಡ ಹರ್ಷ ಮಂದಣ್ಣ ವೀಕ್ಷಕ ವಿವರಣೆ ನೀಡಿದರು. ತಾಂತ್ರಿಕ ನಿರ್ದೇಶಕರಾಗಿ ಮಿನ್ನಂಡ ಜೋಯಪ್ಪ, ಅಂಪೈರ್ಗಳಾಗಿ ಚೋಯಮಾಡಂಡ ಚೆಂಗಪ್ಪ, ನೆಲ್ಲಮಕ್ಕಡ ಪವನ್, ಮೇಕತಂಡ ತೀಸಾ ಬೋಪಯ್ಯ, ಕೋಡಿಮಣಿಯಂಡ ಗಣಪತಿ, ಮತ್ರಂಡ ಬೋಪಣ್ಣ, ಮೂಕಚಂಡ ನಾಚಪ್ಪ, ಆದೇಂಗಡ ಕುಶಾಲಪ್ಪ, ಚೆಯ್ಯಂಡ ಅಪ್ಪಚ್ಚು, ಹೆಚ್. ಎನ್. ಅರುಣ್, ಕುಪ್ಪಂಡ ದಿಲನ್, ತಾಂತ್ರಿಕ ವರ್ಗದಲ್ಲಿ ಗುಡ್ಡಮಾಡ ದರ್ಶನ್, ಕಾಳೇಂಗಡ ಮೋನಿಶಾ, ಕೊಚ್ಚೇರ ದೀಪಿಕಾ ದೇಚಮ್ಮ, ಕಬ್ಬಚ್ಚೀರ ಸುಪ್ರಿತಾ ಹಾಗೂ ಚಿರಿಯಪಂಡ ಸುಬ್ಬಯ್ಯ, ಕಾರ್ಯನಿರ್ವಹಿಸಿದರು.