ಸುಂಟಿಕೊಪ್ಪ, ಫೆ. 18: ಡಾ. ಅಂಬೇಡ್ಕರ್ ಸಮುದಾಯ ಭವನ 5 ವರ್ಷದ ನಂತರ ಪ್ರಯೋಜನಕ್ಕೆ ಸಿಗುವ ಭಾಗ್ಯ ಒದಗಿ ಬಂದಿದೆ. ಕಳೆದ 5 ವರ್ಷಗಳ ಹಿಂದೆ ಆಗಿನ ರಾಜ್ಯ ಮತ್ತು ಯುವಜನ ಸಚಿವರಾಗಿದ್ದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾ ಮತ್ತು ಯುವ ಜನ ಇಲಾಖೆಯಿಂದ ಅಂಬೇಡ್ಕರ್ ಭವನಕ್ಕೆ ರೂ. 10 ಲಕ್ಷ ಬಿಡುಗಡೆ ಮಾಡಿದ್ದರು.
ಕ್ರೀಡಾ ಮತ್ತು ಯುವ ಜನ ಸೇವಾ ಇಲಾಖೆ, ಇದೀಗ ಕಟ್ಟಡ ಪೂರ್ಣಗೊಳಿಸಿ, ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ ಕಟ್ಟಡವನ್ನು ಪರಿಶೀಲನೆ ನಡೆಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿದರು. ನಂತರ ಮಾತನಾಡಿದ ಅªರು ಪಂಚಾಯಿತಿ ವತಿಯಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ, ಸುಂಟಿಕೊಪ್ಪ ದಲಿತ ಸಂಘರ್ಷ ಸಮಿತಿಗೆ ನೀಡುವಂತೆ ಆದೇಶಿಸಿದರು.
ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಸ್ಥಾಪಕ ಅಧ್ಯಕ್ಷ ಹೆಚ್.ಪಿ. ಶಿವಕುಮಾರ್, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಎಮ್.ಎಸ್.ರವಿ, ಗ್ರಾಮ ಪಂಚಾಯಿತಿ ಪಂಚಾಯಿತಿ ಸದಸ್ಯರಾದ ರಜಾಕ್, ಎ. ಶ್ರೀಧರ್, ಕುಮಾರ್, ಮಾಜಿ ಅಧ್ಯಕ್ಷ ಕೆ.ಇ. ಕರೀಮ್, ಮತ್ತಿತರರು ಹಾಜರಿದ್ದರು.