ಮಡಿಕೇರಿ, ಫೆ. 18: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯಡಿ ಜಿಲ್ಲೆಯಾದ್ಯಂತ ಇರುವ ಆಯ್ಕೆಯಾದ ಸ್ಕೌಟ್ಸ್ ಮತ್ತು ಗೈಡ್ಸ್-ಕಚ್-ಬುಲ್ ಬುಲ್ಸ್-ಒಟ್ಟು ಸೇರಿ 490 ವಿದ್ಯಾರ್ಥಿಗಳಿಗೆ ಜಿಲ್ಲಾ ಪುರಸ್ಕಾರ, ತೃತೀಯ ಸೊಪಾನ ಪರೀಕ್ಷೆಯು ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ನೇತೃತ್ವದಲ್ಲಿ ಸ್ಕೌಟ್ಸ್ ಗೈಡ್ಸ್ ಭವನ ಮತ್ತು ದೇವರಾಜ ಅರಸು ಭವನದ ಸಭಾಂಗಣದಲ್ಲಿ ನಡೆಯಿತು.
ಗೈಡ್ಸ್ ವಿಭಾಗದ ಮುಖ್ಯ ಪರೀಕ್ಷಕರಾಗಿ ಮಾರ್ಗರೇಟ್ ಲಸ್ರಾದೋ ವಹಿಸಿದ್ದರು. ಹೆಚ್.ಡಬ್ಲ್ಯು.ಬಿ. ಆಗಿರುವ ಹಲವಾರು ಶಿಕ್ಷಕಿಯರು ಸಹಾಯಕರಾಗಿದ್ದರು. ರಂಜಿತ್ ಕೆ. ಅವರು ಸ್ಕೌಟ್ಸ್ ವಿಭಾಗದ ಪರೀಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಹೆಚ್.ಡಬ್ಲ್ಯು.ಬಿ. ಆಗಿರುವ ಹಲವು ಶಿಕ್ಷಕರು ಇವರಿಗೆ ಸಹಾಯಕರಾಗಿದ್ದರು.
ಜಿಲ್ಲಾ ಪ್ರಧಾನ ಆಯುಕ್ತ ಕಂಬೀರಂಡ ಕಿಟ್ಟು ಕಾಳಪ್ಪ ಮತ್ತು ಖಜಾಂಚಿ ಸೋಮಯ್ಯ, ಗೈಡ್ ತರಬೇತಿ ಆಯುಕ್ತ ಸಾಗಾಯಿ ಮೇರಿ, ಜಿಲ್ಲಾ ಸಂಘಟಕಿ ಯು.ಸಿ. ದಮಯಂತಿ, ಮಡಿಕೇರಿ ತಾಲೂಕು ಕಾರ್ಯದರ್ಶಿ ವಸಂತಿ, ವೀರಾಜಪೇಟೆ ಕಾರ್ಯದರ್ಶಿ ನಳಿನಾಕ್ಷಿ ಮತ್ತು ಹಲವು ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು. ಬುಲ್-ಬುಲ್ ವಿಭಾಗಕ್ಕೆ ಶಾಲಿನಿ, ಕಟ್ ವಿಭಾಗಕ್ಕೆ ರತಿ ಕುಮಾರಿ ನಿರ್ವಹಿಸಿದ್ದರು.