ಸೋಮವಾರಪೇಟೆ, ಫೆ. 18: ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯಿಂದ ತಾಲೂಕಿನ ಶನಿವಾರಸಂತೆಯ ಯಶಸ್ವಿ ಕಲ್ಯಾಣ ಮಂಟಪದಲ್ಲಿ ನಡೆದ 7ನೇ ರಾಜ್ಯಮಟ್ಟದ ಕರಾಟೆ ಮತ್ತು ಯೋಗ ಪಂದ್ಯಾವಳಿಯಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಹಲವು ಪದಕಗಳಿಗೆ ಭಾಜನರಾಗುವ ಮೂಲಕ ಚಾಂಪಿಯನ್ ಟ್ರೋಫಿಯನ್ನು ಪಡೆದರು. ಯಶಸ್ವಿನಿ, ಪ್ರತೀಕ್ಷ, ಅನನ್ಯ, ದಿನೇಶ್, ಮಂಜುಶ್ರೀ, ರವಿನ್, ಜೀವಿತ, ಅಭಿಷೇಕ್, ಅಜಿತ್, ಮೋಹಿತ್, ಶಿಂಷ, ಪ್ರಜ್ಞ, ರೋಜ, ಮಂಜುನಾಥ್, ದರ್ಶನ್, ರಿಶನ್, ಶೋಭಿತ, ಸಿಂಚನ, ರಾಕೇಶ್, ಹೇಮಂತ್, ಸಂಜನ, ಧವನ್, ತುಷಾರಿ, ದಿಗಂತ್, ಪ್ರೇಕ್ಷ, ತಸ್ವಿನ್, ಶಿವಾನಂದ್, ಶಿರಿನ್, ಅಮಿತ್ ಮತ್ತಿತರ ವಿದ್ಯಾರ್ಥಿಗಳು ಪದಕಗಳನ್ನು ಪಡೆದರು. ತರಬೇತುದಾರರಾಗಿ ಅರುಣ್ ಕಾರ್ಯನಿರ್ವಹಿಸಿದರು.