ಸೋಮವಾರಪೇಟೆ, ಫೆ. 19: ಇಲ್ಲಿನ ಸೋಮೇಶ್ವರ ದೇವಾಲಯದ ವತಿಯಿಂದ ತಾ. 24 ರಂದು ಅದ್ಧೂರಿ ಶಿವರಾತ್ರಿ ಮಹೋತ್ಸವ ಮತ್ತು 25 ರಂದು ಗಿರಿಜಾ ಕಲ್ಯಾಣ ಮಹೋತ್ಸವವನ್ನು ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷರಾದ ಎಸ್.ಆರ್. ಸೋಮೇಶ್ ಹೇಳಿದರು.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 24 ರಂದು ಸಂಜೆ 6 ಗಂಟೆಯಿಂದ ಪಟ್ಟಣದ ಸೋಮೇಶ್ವರ ದೇವಾಲಯದ ಸನ್ನಿಧಿಯಲ್ಲಿ ಶಿವರಾತ್ರಿ ಉತ್ಸವದ ಪೂಜೆಗಳು ನಡೆಯಲಿದೆ.

ನಂತರ ಮಾತಾ ಬಳಗ ಮತ್ತು ದೇವಿ ಬಳಗದ ವತಿಯಿಂದ ಭಜನೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು. 25 ರಂದು ಬೆಳಿಗ್ಗೆ 10.30 ರಿಂದ ಪೂಜಾ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.

ಗೋಷ್ಠಿಯಲ್ಲಿ ಬ್ರಾಹ್ಮಣ ಸಮಾಜ ಮತ್ತು ಸೋಮೇಶ್ವರ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಮಧುಸೂಧನ್, ದಿನೇಶ್, ರಾಮ್‍ಪ್ರಸಾದ್, ಎಸ್.ಡಿ. ವಿಜೇತ್, ಶ್ರೀನಿವಾಸ್ ಇದ್ದರು.