ಗೋಣಿಕೊಪ್ಪಲು, ಫೆ. 19: ಮಂಗಳೂರು ವಿಶ್ವ ವಿದ್ಯಾಲಯ ಮಟ್ಟದ 34 ನೇ ವರ್ಷದ ಚಿರಿಯಪಂಡ ಕುಶಾಲಪ್ಪ ಸ್ಮಾರಕ ಹಾಕಿ ಕಪ್‍ನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ಗೆದ್ದುಕೊಂಡಿದೆ. ಫೈನಲ್‍ನಲ್ಲಿ ಸೋಲನುಭವಿಸಿದ ಮೂರ್ನಾಡು ಪ್ರಥಮ ದರ್ಜೆ ಕಾಲೇಜು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಗೋಣಿಕೊಪ್ಪ ಕಾವೇರಿ ಕಾಲೇಜು ತಂಡವು 3-0 ಗೋಲುಗಳ ಅಂತರದಿಂದ ಮೂರ್ನಾಡು ತಂಡವನ್ನು ಮಣಿಸಿತು. ಕಾವೇರಿ ಕಾಲೇಜು ಪರ ವಿಘ್ನೇಶ್ 11, 26 ನೇ ನಿಮಿಷಗಳಲ್ಲಿ 2 ಗೋಲು ಹೊಡೆದರು. 34 ನೇ ನಿಮಿಷದಲ್ಲಿ ಸಂದೇಶ್ ಗೋಲು ಹೊಡೆದು ಗೆಲುವಿನ ಅಂತರವನ್ನು ಹೆಚ್ಚಿಸಿದರು. ಎರಡೂ ತಂಡಗಳಿಗೆ ತಲಾ 4 ಪೆನಾಲ್ಟಿ ಕಾರ್ನರ್ ದೊರೆಯಿತು.

ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ಕಾಳೇಂಗಡ ಬೋಪಣ್ಣ ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿ ಪಡೆದರು. ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದ ಪಂದ್ಯಂಡ ವಿಶಾಲ್ ಮೊಣ್ಣಪ್ಪ, ಉತ್ತಮ ಬ್ಯಾಕ್ ಪ್ರಶಸ್ತಿಯನ್ನು

(ಮೊದಲ ಪುಟದಿಂದ) ವಿಜ್ಞಾನಿಗಳು, ಭಾಷಾ ವಿದ್ವಾಂಸರು, ಮಾನವ ಶಾಸ್ತ್ರಜ್ಞರು ಮತ್ತು ಶ್ರೇಷ್ಟ ಚಿಂತಕರಿಂದ ರಚಿಸಲ್ಪಡುತ್ತಿರುವ ಭಾರತದ ಆಡಳಿತ ಸೇವೆ ಐ.ಎ.ಎಸ್ ಮತ್ತು ಭಾರತದ ವಿದೇಶಾಂಗ ಸೇವೆ ಐ.ಎಫ್.ಎಸ್ ವಿದ್ಯಾರ್ಥಿಗಳ ಸ್ಪರ್ಧಾ ಪರೀಕ್ಷೆಗೆ ಪ್ರಧಾನ ಜ್ಞಾನ ಭಂಡಾರವಾಗಿರುವ ಮನೋರಮ ಪತ್ರಕಾ ಬಳಗ ಹೊರ ತರುತ್ತಿರು ವಾರ್ಷಿಕ ವಿಶ್ವಕೋಶ ಮನೋರಮ ಇಯರ್ ಬುಕ್ 2014, 2015, 2016 ಮತ್ತು 2017 ಸತತವಾಗಿ ಗುರುತಿಸಿ ದಾಖಲಿಸುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸಲು ಬೇರ್ಯಾವದೇ ಮಾನ ದಂಡ ಅಥವಾ ಯಾರದೇ ಸರ್ಟಿಫಿಕೆಟ್ ಕೂಡ ಅವಶ್ಯಕತೆ ಇರುವದಿಲ್ಲ. ಸಂವಿಧಾನ ತಿದ್ದುಪಡಿಗೆ ಸಂಬಂಧ ಯಾವದೇ ರಾಜ್ಯದ ಶಾಸನ ಸಭೆ “ಯಾ” ಕ್ಯಾಬಿನೆಟ್ ನಿರ್ಣಯದ ಅವಶ್ಯಕತೆಯೂ ಕಂಡು ಬರುವದಿಲ್ಲ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು.

ವಿಶ್ವ ಮಾತೃಭಾಷಾ ದಿನಾಚರಣೆ ಅಂಗವಾಗಿ ಇದಕ್ಕೆ ಪರಿಪೂರ್ಣ ಅರ್ಥ ಬರುವ ರೀತಿಯಲ್ಲಿ ಏಳಿಗೆ, ವಿಕಾಸ ಮತ್ತು ಅಭ್ಯುದಯಕ್ಕಾಗಿ ಕೊಡವ ಭಾಷೆಗೆ ಸಂಬಂಧಿಸಿದ ಈ ಪ್ರಧಾನ ಬೇಡಿಕೆಗಳು ಹಾಗೂ ಹಕ್ಕೊತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಬೇಡಿಕೆಗಳು

ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸ ಬೇಕು. ಕೊಡವ ತಕ್ಕನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಭಾಷೆಗಳಲ್ಲೊಂದಾಗಿ ಪರಿಗಣಿಸಬೇಕು, ಕೊಡವ ಭಾಷೆ ಮತ್ತು ಆಕ್ಸ್‍ಫರ್ಡ್ ಡಿಕ್ಷ್ನರಿ ಎರಡೂ ಸಮೃದ್ಧಗೊಳ್ಳಲು ಸರ್ಕಾರ ಮುತುವರ್ಜಿ ವಹಿಸಬೇಕು, ಕೊಡವರ ಭಾಷೆ ಉಳಿಯಬೇಕು ಮತ್ತು ಭೂಮಿಯೂ ಉಳಿಯಬೇಕಾದರೆ ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ನೇ ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಗೆ ಸೇರಿಸಿ ರಾಜ್ಯಾಂಗ ಖಾತರಿ ನೀಡಬೇಕು,

ಕೊಡವ ತಕ್ಕನ್ನು ಆಡಳಿತ ಭಾಷೆಯಾಗಿ ಸಂವಿಧಾನದ 350 ಬಿ ವಿಧಿಯಡಿ ಪರಿಗಣಿಸಬೇಕು, ಸಂವಿಧಾನದ 347ನೇ ವಿಧಿಯ ಪ್ರಕಾರ ಪಠ್ಯ ಕ್ರಮದಲ್ಲಿ ಸೇರಿಸಬೇಕು, ಕೊಂಕಣಿ ಮತ್ತು ಫ್ರೆಂಚ್ ಭಾಷೆಯ ಮಾದರಿಯಲ್ಲಿ ರಾಜ್ಯದ ಎರಡನೇ ಭಾಷೆಯಾಗಿ ಕೊಡವ ತಕ್ಕನ್ನು ಪರಿಗಣಿಸಬೇಕು, ಕೊಡವರನ್ನು ಭಾಷಾ ಅಲ್ಪಸಂಖ್ಯಾತರೆಂದು ಪರಿಗಣಿಸಿ ಸಂವಿಧಾನದ 29 ಮತ್ತು 30 ರನ್ವಯ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ವಿಶೇಷ ಮೀಸಲಾತಿ ಕಲ್ಪಿಸಬೇಕು, ಕನ್ನಡೀಕರಣಗೊಂಡಿರುವ ಕೊಡಗಿನ ಮೂಲ ಗ್ರಾಮಗಳ ಜನಪದೀಯ ಹೆಸರುಗಳನ್ನು ಮತ್ತೆ ಅದೇ ಜನಪದೀಯ ಹೆಸರಿನಿಂದಲೇ ದಾಖಲಿಸಬೇಕು, ಕೊಡವ ಅಲ್ಪಸಂಖ್ಯಾತ ಹಬ್ಬಗಳಾದ ಪುತ್ತರಿ ಕೈಲ್‍ಪೊವ್ದ್, ಎಡಮ್ಯಾರ್, ಕಕ್ಕಡ ಪದ್‍ನಟ್, ಕಾರಣಂಗೊಡ್ಪೊ ಮತ್ತು ಕಾವೇರಿ ಚಂಗ್ರಾಂದಿ ಇತ್ಯಾದಿ ಹಬ್ಬಗಳಿಗೆ ಅಧಿಕೃತ ರಜೆ ಘೋಷಿಸಬೇಕು, ಕೊಡಗರು ಎಂದು ಕಾಗುಣಿತ ದೋಷದಿಂದ ವಿರೂಪ ಗೊಂಡಿರುವ “ಕೊಡವ” ಸಮುದಾಯ ಸೂಚಕ ಹೆಸರನ್ನು “ಕೊಡವ” ಎಂದು ಗೆಜೆಟ್ ನೋಟಿಪಿ üಕೇಷನ್ ಹೊರಡಿಸಬೇಕು, ಕೊಡವ ತಕ್ಕ್‍ನ ವಾರ್ತೆಯನ್ನು ದೂರದರ್ಶನ (ಡಿ.ಡಿ ಮತ್ತು ಆಕಾಶವಾಣಿಯಲ್ಲಿ ಇತರೆ ಪ್ರಮುಖ ಭಾಷೆಗಳಂತೆ ನಿರಂತರ ಬಿತ್ತರಿಸಬೇಕು, ಕೊಡವ ತಕ್ಕ್‍ನ ವಿಶೇಷ ಅಧ್ಯಾಯವನ್ನು ಪ್ರಸಾರ ವಾರ್ತೆಯಲ್ಲಿ ಪ್ರಾರಂಭಿಸಬೇಕು, ಶತ್ರು ರಾಷ್ಟ್ರವಾದ ಪಾಕಿಸ್ತಾನದ ಬಲೂಚಿ ಭಾಷೆಯನ್ನು ಇತ್ತೀಚೆಗೆ ದೂರದರ್ಶನ ಮತ್ತು ಪ್ರಸಾರ ಭಾರತಿಯಲ್ಲಿ ನಿರಂತರ ಪ್ರಸಾರ ಮಾಡುತ್ತಿದ್ದು, ಇದಕ್ಕೆ ಸರ್ಕಾರ ಸಂಪೂರ್ಣ ಉತ್ತೇಜನ ನೀಡುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಎನ್.ಯು. ನಾಚಪ್ಪ ಬಿಬಿಸಿಯಲ್ಲಿ ಪಸ್ತೂನ್, ಖುರ್ದಿ ಭಾಷೆಗಳ ವಿಶೇಷ ಅಧ್ಯಾಯ ಪ್ರಾರಂಭಿಸಿದಂತೆ ಕೊಡವ ತಕ್ಕ್‍ನ ಅಧ್ಯಾಯ ಪ್ರಾರಂಭಿಸಲು ಸರ್ಕಾರ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖg Áದ ಮೂಕೊಂಡ ದಿಲೀಪ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.