ವೀರಾಜಪೇಟೆ, ಫೆ. 19: ನಿಟ್ಟೂರು ಗ್ರಾಮದ ನೇವರೆ ತಟ್ಟೆಕೆರೆ ಎಂಬಲ್ಲಿ ಕಾಫಿತೋಟ ಹೊಂದಿರುವ ಮಲ್ಲಂಗಡ ಎನ್. ಕಮಲಾಕ್ಷಿ ಅಲಿಯಾಸ್ ರಾಣಿ ಹಾಗೂ ಆಕೆಯ ಬುದ್ಧಿಮಾಂದÀÀ್ಯ ಮಗಳ ಮೇಲೆ ಸಂಬಂಧಿಕರು ಮೂವರು ನಿನ್ನೆ ದಿನ ಮಾರಣಾಂತಿಕ ಹಲ್ಲೆ ನಡೆಸಿದ ದೂರಿನ ಮೇರೆ ಪೊನ್ನಂಪೇಟೆ ಪೊಲೀಸರು ಇಂದು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕಮಲಾಕ್ಷಿ ಅವರು ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋದ ಸಂದರ್ಭವನ್ನು ಸಾಧಿಸಿದ ಮೂವರು ಕಾರ್ಮಿಕರನ್ನು ಕರೆದೊಯ್ದು ಸರ್ವೆ ನಂ 67/03 ಕಾಫಿ ತೋಟದಲ್ಲಿ ಕರಿಮೆಣಸು ಕುಯ್ಯುತ್ತಿದ್ದುದನ್ನು ಅಪರಾಹ್ನ ಬಂದು ಪ್ರಶ್ನಿಸಿದ ಕಮಲಾಕ್ಷಿ ಹಾಗೂ ಆಕೆಯ ಪುತ್ರಿಯ ಮೇಲೆ ಹಲ್ಲೆ ನಡೆಸಿ ಇಬ್ಬರಿಗೂ ಜೀವ ಭಯದ ಬೆದರಿಕೆ ಹಾಕಿದ್ದಾರೆಂದು ಕಮಲಾಕ್ಷಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದು 20ಮಂದಿ ಕಾರ್ಮಿಕರು ವಾಹನದಲ್ಲಿ ಬಂದು ಕರಿಮೆಣಸು ಕುಯ್ಯುತ್ತಿದ್ದರೆಂದು ತಿಳಿಸಿದ್ದಾರೆ.
ಹಲ್ಲೆಯಿಂದ ಗಂಭೀರ ಸ್ವರೂಪದ ಗಾಯಗೊಂಡಿರುವ ಕಮಲಾಕ್ಷಿ ಮತ್ತು ಪುತ್ರಿ ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ವಿಧವೆ ಕಮಲಾಕ್ಷಿಗೆ ಪೊಲೀಸ್ ರಕ್ಷಣೆ ನೀಡುವಂತೆ ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಿಗೆ ಕವiಲಾಕ್ಷಿ ಲಿಖಿತ ಮನವಿ ನೀಡಿದ್ದು ಇದರ ಪ್ರತಿಗಳನ್ನು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ, ತಾಲೂಕಿನ ವಲಯ ಪೊಲೀಸ್ ಅಧಿಕಾರಿ ಹಾಗೂ ಮೈಸೂರು ವಿಭಾಗದ ಡಿ.ಐ.ಜಿಗೂ ನೀಡಿದ್ದಾರೆ.