ಮಡಿಕೇರಿ, ಫೆ. 19: ಕೊಡಗು ಜಿಲ್ಲೆಯಲ್ಲಿ ಟಿಪ್ಪುವಿನಿಂದಾಗ ಹಿಂದೂಗಳ ಮತಾಂತರ, ಅತ್ಯಾಚಾರ, ಹತ್ಯೆಯನ್ನು ಮರೆಯುವದು ಎಂದಿಗೂ ಸಾಧ್ಯವಿಲ್ಲ ಎಂದು ವಿಶ್ವಹಿಂದೂ ಪರಿಷತ್‍ನ ಕರ್ನಾಟಕ ದಕ್ಷಿಣ ಪ್ರಾಂತ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.ವಿಶ್ವಹಿಂದೂ ಪರಿಷತ್‍ನ ಯುವ ವಿಭಾಗ ಭಜರಂಗದಳದ ಪ್ರಾಂತ ವರ್ಗದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ಕೊಡಗಿನ ಜನತೆಗೆ ಕಾವೇರಿ ಮಾತೆಯ ಮೇಲೆ ಅಪಾರ ಗೌರವ, ಪ್ರೀತಿ ಇದೆ. ಆದರೆ ಇಲ್ಲಿ ನಿರಂತರ ಮತಾಂತರ, ಹಿಂದೂ ವಿರೋಧಿ ಕೃತ್ಯ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಯುವ ಜನತೆ ಮೋಜು, ಮಸ್ತಿ ಹಾಗೂ ದುಶ್ಚಟಗಳಿಗೆ ಬಲಿಯಾಗದೇ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಬೇಕು. ಸುರಕ್ಷೆ - ಸಂಸ್ಕಾರದೊಂದಿಗೆ ಸಂಘಟಿತ ಸಮಾಜವನ್ನು ನಿರ್ಮಾಣ ಮಾಡುವದು ಸಂಘಟನೆಯ ಮೂಲ ಉದ್ದೇಶವಾಗಬೇಕು.

ನಾನು ಎಂಬ ಅಹಂ ಇರಬಾರದು. ನಾವು ಎಂಬದು ನಮ್ಮ ನಿಲುವಾಗಬೇಕು. ಭೂಮಿಯ ಮೇಲೆ ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕು ಇದೆ. ಇಂತಹ ವಿಶಾಲವಾದ ಸಂಸ್ಕøತಿಯ ಮನೋಭಾವನೆಯನ್ನು ಹೊಂದಿರುವ ಸನಾತನ ಹಿಂದೂ ಧರ್ಮ ಸಮಾನತೆಯನ್ನು ಕಲ್ಪಿಸಿದೆ.

ಆದರೆ ಇಂದು ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದೆಡೆ ಮುಗ್ಧ ಹಿಂದೂಗಳನ್ನು ಆಸೆ, ಆಮಿಷ ತೋರಿಸಿ ಮತಾಂತರ ಮಾಡುವ ಕೆಲಸ

(ಮೊದಲ ಪುಟದಿಂದ) ನಿರಂತರವಾಗಿ ನಡೆಯುತ್ತಿದೆ. ಇನ್ನೊಂದೆಡೆ ಲವ್ ಜಿಹಾದ್, ಭೂ ಮಾಫಿಯಾ, ಭಯೋತ್ಪಾದನೆಯ ಮೂಲಕ ಹಿಂದೂ ಧರ್ಮದ ವಿರುದ್ಧ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಮತ್ತೊಂದೆಡೆ ಹಿಂದೂಗಳ ಮಧ್ಯೆಯೇ ಸಂಶಯದ ವಿಷ ಬೀಜವನ್ನು ಬಿತ್ತಿ ದುರ್ಬಲಗೊಳಿಸುವ ಕೆಲಸ ನಿರಂತರ ನಡೆಯುತ್ತಿದೆ. ಇಂತಹ ಪಡ್ಯಂತ್ರದ ವಿರುದ್ಧ ಯುವ ಜನತೆ ಸಂಘಟಿತವಾಗಿ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾಗಿದೆ.

ಭೂ ಮಾತೆ, ಗೋ ಮಾತೆ ಹಾಗೂ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅನಾಚಾರ, ಅತ್ಯಾಚಾರದ ವಿರುದ್ಧ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಭಜರಂಗದಳ ದೇಶದ 10 ಯುವ ಸಂಘಟನೆಗಳಲ್ಲಿ ಒಂದಾಗಿದ್ದು, ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ಚಟುವಟಿಕೆಯನ್ನು ಇನ್ನಷ್ಟು ಹೆಚ್ಚಿಸುವದರೊಂದಿಗೆ ಬಲಿಷ್ಠ ಸಾಮಾಜಿಕ ಸಂಘಟನೆಯಾಗಿ ರೂಪುಗೊಳ್ಳಬೇಕಾಗಿದೆ ಎಂದರು.

ಹಿಂದೂಗಳು ಕಡಿಮೆ ಸಂಖ್ಯೆಯಿರುವ ಪ್ರದೇಶಗಳಲ್ಲಿ ಆತಂಕದಿಂದಲೇ ಹಿಂದೂಗಳು ಜೀವನ ಸಾಗಿಸುತ್ತಿದ್ದಾರೆ. ಇದು ಆತಂಕಕಾರಿಯಾಗಿದ್ದು, ಕೇರಳದಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿ ಸರ್ಕಾರಿ ಪ್ರಾಯೋಜಿತ ಹತ್ಯೆಗಳು ನಡೆಯುತ್ತಿದೆ ಎಂದು ಆರೋಪಿಸಿದರು. ಕೇರಳದ ಖಾರಸ್ಥಾನವನ್ನು ವಿಸ್ತರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬರುತ್ತಿದ್ದು, ಸಂಘ ಪರಿವಾರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಹೇಳಿದರು.

ಎರಡು ದಿನಗಳ ಕಾಲ ನಡೆದ ವರ್ಗದಲ್ಲಿ ಪ್ರಾಂತ ಸಂಚಾಲಕ ಶರಣ್ ಪಂಪ್‍ವೆಲ್, ಸಹ ಸಂಚಾಲಕ ರಘು ಸಕಲೇಶಪುರ ವಿವಿಧ ಅವಧಿಗಳಲ್ಲಿ ಮಾರ್ಗದರ್ಶನ ಮಾಡಿದರು. ಇದೇ ಸಂದರ್ಭ ಭಜರಂಗದಳದ ವಿವಿಧ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು. ಪ್ರಾಂತ ಗೋರಕ್ಷಾ ಪ್ರಮುಖ್ ಮುರುಳಿಕೃಷ್ಣ ಸ್ವಾಗತಿಸಿ, ವಂದಿಸಿದರು.

ಈ ಸಂದರ್ಭ ಕೊಡಗು ಜಿಲ್ಲಾ ಸಂಚಾಲಕ ಎಂ.ಕೆ. ಅಜಿತ್‍ಕುಮಾರ್, ಸಹ ಸಂಚಾಲಕ ಚೇತನ್ ಸೇರಿದಂತೆ ವಿವಿಧ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.