ನಾಪೆÇೀಕ್ಲು, ಫೆ. 19: ನಾಪೆÇೀಕ್ಲು ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಾಣಿಸಿ ಕೊಳ್ಳುತ್ತಿರುವ ಜಾಂಡಿಸ್. ಟೈಫಾಯ್ಡ್ ಸೇರಿದಂತೆ ಏಡ್ಸ್, ಕುಷ್ಠ, ಮಲೇರಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್‍ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿದ್ಯಾರ್ಥಿಗಳು ಪಟ್ಟಣದಲ್ಲಿ ಜಾಥಾ ನಡೆಸಿದರು. ಜಾಥಾದಲ್ಲಿ ಎನ್.ಎಸ್.ಎಸ್. ಮತ್ತು ರೆಡ್ ರಿಬ್ಬನ್ ಕ್ಲಬ್ ಸಂಚಾಲಕಿ ಡಾ. ಕಾವೇರಿ ಪ್ರಕಾಶ್, ಪ್ರಾಧ್ಯಾಪಕಿ ಕನ್ನಿಕ, ನಾಪೆÇೀಕ್ಲು ಸಮುದಾಯ ಆರೋಗ್ಯ ಕೇಂದ್ರದ ಹೆಚ್.ಐ.ವಿ ಆಪ್ತ ಸಮಾಲೋಚಕ ಕೃಷ್ಣ ಕುಮಾರ್, ಪ್ರಾಧ್ಯಾಪಕ ವೃಂದ ಇದ್ದರು.
- ದುಗ್ಗಳ