ಪೊನ್ನಂಪೇಟೆ, ಫೆ. 19: ಪೊನ್ನಂಪೇಟೆಯ ಸೈಂಟ್ ಆ್ಯಂಟನಿ ಚರ್ಚ್‍ನ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ಸೈಂಟ್ ಆ್ಯಂಟನಿಯ ಪ್ರತಿಮೆಯ ಭವ್ಯ ಮೆರವಣಿಗೆ ಪೊನ್ನಂಪೇಟೆಯಲ್ಲಿ ಜರುಗಿತು. ಅಸಂಖ್ಯಾ ಕ್ರೈಸ್ತ ಭಾಂಧವರು ಸಂಜೆ ದೀಪವನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಧಾರ್ಮಿಕ ವಿಧಿವಿಧಾನಗಳು ಧರ್ಮಗುರುಗಳ ನೇತೃತ್ವದಲ್ಲಿ ಜರುಗಿತು.