ಗೋಣಿಕೊಪ್ಪಲು, ಫೆ. 19: ಇಲ್ಲಿನ ಕಾವೇರಿ ಕಾಲೇಜ್ ಪೋಸ್ಟ್ ಗ್ರಾಜ್ಯೂಯೇಷನ್ ವತಿಯಿಂದ ತಾ. 21 ರಂದು ಸಾಕ್ಷಾತ್ಕಾರ 2ಕೆ17 ಎಂಬ ರಾಜ್ಯಮಟ್ಟದ ಕಾಮರ್ಸ್ ಮ್ಯಾನೇಜ್ಮೆಂಟ್ ಫೆಸ್ಟ್ ನಡೆಯಲಿದೆ ಎಂದು ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಕೆ. ಪೂವಣ್ಣ ತಿಳಿಸಿದ್ದಾರೆ.
2ನೇ ವರ್ಷದ ಈ ಫೆಸ್ಟ್ನಲ್ಲಿ ಮಂಗಳೂರು, ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳ ಪಿಜಿ ತಂಡಗಳಿಂದ ಪೈಪೋಟಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಟ್ರೇಸರ್ ಹಂಟ್, ಮಾರ್ಕೆಟಿಂಗ್, ಹ್ಯೂಮನ್ ರಿಸೋರ್ಸ್, ಫೈನಾನ್ಸ್ ಹಾಗೂ ಬೆಸ್ಟ್ ಮ್ಯಾನೇಜರ್ ಸ್ಪರ್ಧೆಗಳು ನಡೆಯಲಿವೆ ಎಂದರು.
ಎಂಕಾಂ ವಿಭಾಗದ ಮುಖ್ಯಸ್ಥೆ ಡಾ. ಲೆ. ಎಸ್.ಎನ್. ಬೀನಾ ಮಾತನಾಡಿ, ಸುಮಾರು 20 ತಂಡಗಳು ಪೈಪೋಟಿಯಲ್ಲಿ ಪಾಲ್ಗೊಳ್ಳಲಿವೆ. ಪ್ರಧಾನಿ ಮೋದಿ ಅವರ ಸ್ಕಿಲ್ ಇಂಡಿಯಾ ಚಿಂತನೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅವರಲ್ಲಿನ ಕೌಶಲ್ಯ ಅನಾವರಣಕ್ಕೆ ಅವಕಾಶ ನೀಡಲಾಗಿದೆ.
ತಂಡವಾಗಿ ಕಾರ್ಯನಿರ್ವಹಿ ಸಲು ಬೇಕಾದ ಕೌಶಲ್ಯಾಭಿವೃದ್ಧಿ ಹಾಗೂ ನಾಯಕತ್ವಗುಣ ವೃದ್ಧಿಗೆ ಕೂಡ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳೇ ದಾನಿಗಳ ಸಹಾಯದಿಂದ ಆರ್ಥಿಕ ಕ್ರೋಡೀಕರಣ ಮಾಡಿ ಶ್ರಮ ವಹಿಸಿದ್ದಾರೆ ಎಂದರು.
ಜಾಗತಿಕ ತಾಪಮಾನ ತಗ್ಗಿಸುವ ಚಿಂತನೆ ಕಾರ್ಯಕ್ರಮದಲ್ಲಿ ಹಸಿರಿಗೆ ಹೆಚ್ಚು ಒತ್ತು ನೀಡಲಾಗಿದೆ. ಈ ರೀತಿ ಜನರಲ್ಲಿ ಪರಿಸರ ಉಳಿಸುವ ಸಂದೇಶ ನೀಡಲಾಗುತ್ತಿದೆ ಎಂದರು.
ಅಂದು ಬೆಳಗ್ಗೆ 9 ಕ್ಕೆ ನಡೆಯುವ ಕಾರ್ಯಕ್ರಮವನ್ನು ಬೆಂಗಳೂರು ಕಾಂಗ್ರೆಸ್ ಕಮಿಟಿ ಪ್ರ. ಕರ್ಯದರ್ಶಿ ಹರೀಶ್ ಬೋಪಣ್ಣ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ ಪಾಲ್ಗೊಳ್ಳಲಿ ದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಉಪನ್ಯಾಸಕರು ಗಳಾದ ಕೆ ಜಿ ಮುದ್ದಪ್ಪ, ವಿ.ಎಂ. ಶಾಕೀರ್ ಉಪಸ್ಥಿತರಿದ್ದರು.