ಶ್ರೀಮಂಗಲ, ಫೆ. 21 : ಕುಂದ ಈಶ್ವರ ದೇವರ ವಾರ್ಷಿಕ ಉತ್ಸವ ತಾ.22 ರಂದು (ಇಂದು) ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅಡ್ಡಂಡ ಪ್ರಕಾಶ್ ತಿಳಿಸಿದ್ದಾರೆ.

ಬೊಟ್ಯತ್ ನಾಡು ಈಶ್ವರ ದೇವರ ವಾರ್ಷಿಕ ಉತ್ಸವ ತಾ. 14ರಿಂದ ಪ್ರಾರಂಭವಾಗಿದ್ದು, ತಾ. 22ರಂದು (ಇಂದು) ಸಂಜೆ 7 ಗಂಟೆಯಿಂದ ವಿವಿಧ ವಿಧಿ-ವಿಧಾನಗಳೊಂದಿಗೆ ದೇವಳ ಜಳಕ ಹಾಗೂ ವಿಶೇಷ ಪೂಜೆ ನಡೆಯಲಿದೆ. ಕುಂದ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಈಚೂರು ಹಾಗೂ ಅರುವತ್ತೋಕ್ಲು ಗ್ರಾಮಗಳನ್ನೊಳಗೊಂಡ ಈ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದ್ದು, ಈ ದೇವಸ್ಥಾನ ಕುಂದ ಬೆಟ್ಟದ ತಪ್ಪಲಿನಲ್ಲಿದೆ.