ಮಡಿಕೇರಿ, ಫೆ. 21: ಪಾರಾಣೆ ಗ್ರಾಮದ ಕೈಕಾಡು ಮುಕ್ಕೋಟು ಮಹಾಲಕ್ಷ್ಮಿ ದೇವಸ್ಥಾನ ರಸ್ತೆಯನ್ನು ರೂ. 5 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಲಾಗುತ್ತಿದ್ದು, ಈ ಕಾಮಗಾರಿಗೆ ಚಾಲನೆ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ನಾಯಕಂಡ ಮುತ್ತಪ್ಪ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪಾಡೆಯಂಡ ಮುತ್ತು, ಕದ್ದಣಿಯಂಡ ಗಿರೀಶ್ ಮತ್ತಿತರ ಗ್ರಾಮಸ್ಥರು ಹಾಜರಿದ್ದರು.