ಮಡಿಕೇರಿ, ಫೆ. 20: ಯವಕಪಾಡಿ ಕುಡಿಯರ ಮಂದ್ನಲ್ಲಿ ತಾ. 24 ರಂದು ಕನ್ನಡ ಸಂಸ್ಕøತಿ ಇಲಾಖೆ, ಪೂಮಾಲೆ ಕುಡಿಯ ಸಾಂಸ್ಕøತಿಕ ಸಮಿತಿ ಮತ್ತು ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದ ವತಿಯಿಂದ ‘ಪೂಮಾಲೆ ಕುಡಿಯ ಜಾನಪದ ಮಂದ್ ನಮ್ಮೆ 2017’ ನಡೆಯಲಿದೆ.
ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಉದ್ಘಾಟಿಸಲಿದ್ದಾರೆ. ಯವಕಪಾಡಿ ಗ್ರಾಮದ ಕೆ.ಎ. ಚಿಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಜಿ. ಅನಂತಶಯನ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕ, ಮೇಚಿರ ಸುಭಾಷ್ ನಾಣಯ್ಯ, ಉಪಾಧ್ಯಕ್ಷರು, ಕೊಯವ ಸಮಾಜ, ಪಡಿಞರಂಡ ಅಯ್ಯಪ್ಪ ಅಧ್ಯಕ್ಷರು, ಹೆಗಡೆ ಸಮಾಜ, ಕೇಟೋಳಿರ ರಘು ಕುಟ್ಟಪ್ಪ ಊರ್ಮಂದ್ ತಕ್ಕರು, ಯವಕಪಾಡಿ, ಬಬ್ಬೀರ ಸರಸ್ವತಿ, ಮಾನವ ಹಕ್ಕು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ, ದಿಲೀಪ್ ಕುಮಾರ್ ಅಧ್ಯಕ್ಷರು, ನಾಲ್ಕುನಾಡು ಪೂಮಾಲೆ ಕುಡಿಯ ಸಾಂಸ್ಕøತಿಕ ಸಮಿತಿ, ಪಳಂಗಪ್ಪ ಕಾಳಚಂಡ, ಸಾಂಸ್ಕøತಿಕ ತರಬೇತುದಾರರು, ಕರ್ತಂಡÀ ಶೈಲಾ ಕುಟ್ಟಪ್ಪ ಅಧ್ಯಕ್ಷರು, ಕುಂಜಿಲ - ಕಕ್ಕಬ್ಬೆ ಗ್ರಾಮ ಪಂಚಾಯಿತಿ, ಕೋಡಿಮಣಿಯಂಡ ಉಮಾ ಬಿದ್ದಯ್ಯ, ಶಿಕ್ಷಕರು, ಕೆ.ಕೆ. ಬೋಪಯ್ಯ ಕೋಲಿಂದ ಮಲೆ ಒಕ್ಕ, ಕೆ.ಎ. ಸುಬ್ಬಯ್ಯ, ತೆಂಬರೆಮಲೆ ಒಕ್ಕ, ಕೆ.ಎ. ಪೆಮ್ಮಯ್ಯ, ಕುಂಡುಮಲೆ ಒಕ್ಕ ಹಾಗೂ ಮುತ್ತಮ್ಮ ಪಡಿಯಮಲೆ ಒಕ್ಕ ಭಾಗವಹಿಸಲಿದ್ದಾರೆ ಎಂದು ಸಂಘಟಕ ಕುಡಿಯರ ಎ. ಮುತ್ತಪ್ಪ ತಿಳಿಸಿದ್ದಾರೆ.