ಮಡಿಕೇರಿ, ಫೆ. 21: ಇಲ್ಲಿಗೆ ಸಮೀಪದ ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ 10 ದಿನಗಳ ಅಹೋರಾತ್ರಿ ಶಿವಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ತಾ. 16 ರಿಂದ ಕಾರ್ಯಕ್ರಮಗಳು ಆರಂಭಗೊಂಡಿದ್ದು, ತಾ. 21 ರಂದು ಭೂತನಕಾಡುವಿನ ಓಂ ಶಕ್ತಿ ಭಜನಾ ಸಂಘದಿಂದ ಭಜನೆ ನಡೆಯಿತು. ತಾ. 22 ರಂದು (ಇಂದು) ಮಡಿಕೇರಿಯ ಮುಳಿಯ ಫೌಂಡೇಶನ್ ಭಜನಾ ತಂಡದಿಂದ ಭಜನೆ, ತಾ. 23 ರಂದು ರಾತ್ರಿ 7.30 ರಿಂದ 9 ಗಂಟೆವರೆಗೆ ಸುದರ್ಶನ್ ಕಾರ್ಕಳ ತಂಡದವರಿಂದ ಸತ್ಸಂಗ ನಡೆಯಲಿದೆ.
ತಾ. 24 ರಂದು ಬೆಳಿಗ್ಗೆ 7 ಗಂಟೆಗೆ ಮಹಾಗಣಪತಿ ಹೋಮ, 10.30 ರಿಂದ ಗ್ರಾಮದ ನಾಲ್ಕು ದಿಕ್ಕುಗಳಿಂದ ಮೆರವಣಿಗೆಯಲ್ಲಿ ಹೊರೆ ಕಾಣಿಕೆ ತಂದು ಸಮರ್ಪಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಗೋದೂಳಿ ಪೂಜೆ, 7.30ಕ್ಕೆ ದೀಪಾಲಂಕಾರ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರು ಗಲಿವೆ. ಶಾಸಕ ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಪಾಲ್ಗೊ ಳ್ಳುವರು. 8 ರಿಂದ ರುದ್ರಾಭಿಷೇಕ, ರಂಗಪೂಜೆ ನಂತರ ಎಲ್‍ಇಡಿ ಸ್ಕ್ರೀನ್‍ನಲ್ಲಿ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ತಾ. 25 ರಂದು ಬೆಳಿಗ್ಗೆ 6 ಗಂಟೆ ಯಿಂದ ನೈರ್ಮಲ್ಯ ಪೂಜೆ, ನವಕಲಶ ಪೂಜೆ, ರುದ್ರಾಭಿಷೇಕ ನಡೆಯಲಿದ್ದು, 11 ಗಂಟೆಗೆ ಮಂಗಳೂರು ವಿಭಾಗ ವಿ.ಹಿಂ.ಪ. ಸಹಕಾರ್ಯದರ್ಶಿ ಪ್ರಕಾಶ್ ಮಲ್ಪೆ ಅವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಪೂಜೆ ನಡೆಯಲಿದ್ದು, ನಂತರ ಅನ್ನಸಂತರ್ಪಣೆ ನಡೆಯಲಿದೆ.