ಮಡಿಕೇರಿ ಫೆ. 20 : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಮೈಸೂರು ವಿಭಾಗೀಯ ಶಾಖೆ ವತಿಯಿಂದ ಅಕ್ಷಯ್ ಉರ್ಜಾ ದಿವಸ್ ಅಂಗವಾಗಿ ನಡೆದ ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿ ಗಳು ತಮ್ಮ ಪ್ರತಿಭೆಯನ್ನು ಮೆರೆದರು. ಜಿಲ್ಲೆಯ ವಿವಿಧ ಶಾಲೆಗಳ 4 ರಿಂದ 6 ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ 7 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು. “ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆಯ” ವಿಚಾರದ ಬಗ್ಗೆ ನಡೆದ ಸ್ಪರ್ಧೆಯ ವಿಜೇತ ವಿದ್ಯಾರ್ಥಿ ಗಳಿಗೆ ನಗರದ ಜೂನಿಯರ್ ಕಾಲೇಜು ಆವರಣದ ಬಿಆರ್‍ಸಿ ಸಭಾಂಗಣದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಿ. ಆರ್. ಬಸವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಮೈಸೂರು ವಿಭಾಗೀಯ ಯೋಜನಾ ಅಭಿಯಂತರರಾದ ಡಿ.ಕೆ. ದಿನೇಶ್‍ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಬಾರ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಶುಕ್ರು ದೇವೇಗೌಡ, ಮಡಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯರಾದ ಶಿವರಾಮ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜೇತರು (ಚಿತ್ರಕಲಾ ಸ್ಪರ್ಧೆ) : ಮಡಿಕೇರಿಯ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳಾದ ಬಿ. ಆರ್. ರಿಷಿತಾ ಪ್ರಥಮ, ಎಂ. ಆರ್. ವಿಘ್ನೇಶ್ ದ್ವಿತೀಯ, ನಾಪೋಕ್ಲು ರಾಮಟ್ರಸ್ಟ್ ಇಂಗ್ಲೀಷ್ ಮಾಧ್ಯಮ ಶಾಲೆಯ ಎಂ.ಐ.ಶಬೀಭ ತೃತೀಯ ಬಹುಮಾನ ಗಳಿಸಿದ್ದಾರೆ. ಸಮಧಾನಕರ ಬಹುಮಾನಗಳನ್ನು ಮಡಿಕೇರಿಯ ಸಂತ ಜೋಸೆಫರ ಶಾಲೆಯ ಎ.ವಿ.ಅವನಿಕಾ, ಟಿ.ಎಂ.ಮಿಥಿಲ, ನಾಪೋಕ್ಲು ರಾಮಟ್ರಸ್ಟ್ ಇಂಗ್ಲೀಷ್ ಮಾಧ್ಯಮ ಶಾಲೆಯ ಎ.ಜಿ.ಅಂಕಿತಾ, ಎ.ದೀಪ್ನ ಹಾಗೂ ಕೇಂದ್ರೀಯ ವಿದ್ಯಾಲಯದ ಆರ್.ಮೋಹಿತ್ ಪಡೆದಿದ್ದಾರೆ.

ರಸಪ್ರಶ್ನೆ ಸ್ಪರ್ಧೆ : ಮಡಿಕೇರಿಯ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳಾದ ಎಂ.ಎನ್. ವಿಹಾನ್ ಪ್ರಥಮ, ಜ್ಞಾನ ಜ್ಯೋತಿ ಶಾಲೆಯ ಬಿ.ಎ.ಸಿಂಧು ದ್ವಿತೀಯ, ಸರ್ವ ದೈವತಾ ಶಾಲೆಯ ಬಿ.ಸಿ.ಧನುಷ್ ತೃತೀಯ ಬಹುಮಾನ ಗಳಿಸಿದ್ದಾರೆ.

ಸಂತ ಜೋಸೆಫರ ಶಾಲೆಯ ಅರ್ಲಿನ್ ಫರ್ನಾಂಡಿಸ್, ಕೆ.ಎ.ರುಚಿ, ಸರ್ವ ದೈವತಾ ಶಾಲೆಯ ವಿ.ಎಸ್.ಸುಜಿತ್, ಜ್ಞಾನ ಜ್ಯೋತಿ ಶಾಲೆಯ ಜಿ.ಆರ್.ಸಿಂಚನ ಹಾಗೂ ಸರ್ವ ದೈವತಾ ಶಾಲೆಯ ಎಸ್.ಲಿಖಿತ ಸಮಾಧಾನಕರ ಬಹುಮಾನ ಪಡೆದಿದ್ದಾರೆ.