ಆಲೂರುಸಿದ್ದಾಪುರ, ಫೆ. 20: ರಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತವಾಗಿ ಸಮಿಪದ ಮಾಲಂಬಿ ಶ್ರೀ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ವಿಶೇóಷ ಪೂಜೆ ಮತ್ತು ಜಾತ್ರಾ ಮಹೋತ್ಸವವನ್ನು ನಡೆಸಲಾಗುವದೆಂದು ಮಾಲಂಬಿ ಮಳೆ ಮಲ್ಲೇಶ್ವರ ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ತಾ. 24 ರ ಶುಕ್ರವಾರ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಬೆಟ್ಟದ ಮೇಲಿರುವ ದೇವಾಲಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2-30 ಗಂಟೆಯ ತನಕ ವಿಶೇಷ ದೇವತಾ ಪೂಜೆಯನ್ನು ನಡೆಸಲಾಗುವುದು. ಭಕ್ತಾದಿಗಳು ಕುಡಿಯುವ ನೀರನ್ನು ತಾವೆ ತರಬೇಕಾಗುತ್ತದೆ, ವ್ಯಾಪರಸ್ಥರು ಅಂಗಡಿ- ಮುಂಗಟ್ಟುಗಳನ್ನು ಹಾಕುವವರು ಸಮುದಾಯ ಭವನದ ಕೆಳಭಾಗದಲ್ಲಿ ಹಾಕಬಹುದಾಗಿದೆ ಎಂದು ದೇವಾಲಯ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಿದೆ.