ಮಡಿಕೇರಿ, ಫೆ. 20: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರಕ್ಕೆ 16 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಚುನಾವಣೆಗೆ ಸಂಬಂಧಿಸಿ ದಂತೆ ತಾ. 26 ರಂದು ಚುನಾವಣೆ ನಿಗದಿಯಾಗಿತ್ತು. ಅಭ್ಯರ್ಥಿಗಳು ಸಲ್ಲಿಸಿದ ಉಮೇದುವಾರಿಕೆ ಅರ್ಜಿಯನ್ನು ತಾ. 19 ರಂದು ಪರಿಶೀಲಿಸಲಾಗಿದ್ದು, ತಾ. 20 ರಂದು ಕೆಲವು ಉಮೇದುವಾರರು ಸ್ವ-ಇಚ್ಚೆ ಮೇರೆಗೆ ನಾಮಪತ್ರವನ್ನು ವಾಪಾಸು ಪಡೆದುಕೊಂಡಿದ್ದು, ಆಯ್ಕೆಯಾಗ ಬೇಕಾದ ಸ್ಥಾನಗಳಿಗೆ ಸಮನಾಗಿ ಅಭ್ಯರ್ಥಿಗಳು ಉಳಿದಿರುವದರಿಂದ ಅವಿರೋಧವಾಗಿ ಆಯ್ಕೆಗೊಂಡವರ ಪಟ್ಟಿಯನ್ನು ಪ್ರಕಟಗೊಳಿಸಲಾಗಿದೆ.

ಮಡಿಕೇರಿ ಸಾಮಾನ್ಯ ಕ್ಷೇತ್ರದಿಂದ ಬಾಬು ಚಂದ್ರ ಉಳ್ಳಾಗಡ್ಡಿ, ಕೆ.ಇ. ಮ್ಯಾಥ್ಯೂ, ಹೆಚ್.ಕೆ. ಅನಿಲ್, ಎಂ.ಇ. ಅಬ್ದುಲ್ ರಹೀಂ, ವೀರಾಜಪೇಟೆ ಸಾಮಾನ್ಯ ಕ್ಷೇತ್ರದಿಂದ ಕೆ.ಬಿ. ಗಿರೀಶ್ ಗಣಪತಿ, ಎಂ.ಪಿ. ಕಾವೇರಪ್ಪ (ಕಾಶಿ), ಎಂ. ಬಿಜೋಯ್, ಎಂ.ಕೆ. ಮಣಿ, ಜಿಲ್ಲಾ ಮಹಿಳಾ ಮೀಸಲು ಕ್ಷೇತ್ರದಿಂದ ಬಿ.ಆರ್. ಸವಿತಾ ರೈ, ಎಸ್.ಎಂ. ಜಯಂತಿ, ಜಿಲ್ಲಾ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ. ರಾಮಕೃಷ್ಣಯ್ಯ, ಜಿಲ್ಲಾ ಹಿಂದುಳಿದ ‘ಎ’ ಪ್ರವರ್ಗದಿಂದ ಕೆ.ಎಂ. ಗಣೇಶ್, ಎಸ್.ಐ. ಮುನೀರ್ ಅಹಮದ್, ಸೋಮವಾರಪೇಟೆ ಸಾಮಾನ್ಯ ಕ್ಷೇತ್ರದಿಂದ ಬಿ. ಅಮೃತ ರಾಜ್, ಬಿ. ಜನಾರ್ಧನ ಪ್ರಭು, ಎ.ಪಿ. ವೀರರಾಜು ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಎಸ್.ಎಂ. ರಘು ತಿಳಿಸಿದ್ದಾರೆ.

ಮಾರ್ಚ್ 6 ರಂದು ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ರಿಟರ್ನಿಂಗ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ.