ಚೆಟ್ಟಳ್ಳಿ, ಫೆ.22: ಮೈಸೂರಿನ ಶ್ರೀ ಚಾಮ ರಾಜೇಂದ್ರ ಮೃಗಾಲಯ ದಲ್ಲಿ ಆಯೋಜಿಸಿದ್ದ ಂ ಥಿouಣh ಛಿಟub oಜಿ mಥಿsuಡಿu zoo-2016 ನ ಫೊಟೋಗ್ರಫಿ ಸ್ಪರ್ಧೆಯಲ್ಲಿ ಕೊಡಗಿನ ಅಮ್ಮತ್ತಿಯ ಕುಂಞಂಗಡ ಮಾಚಯ್ಯ (ಮಾಚು) ಅವರ ಹೆಜ್ಜೇನಿನ ಗೂಡಿಗೆ ಹದ್ದಿನ ಧಾಳಿಯ ಛಾಯಾಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಮೈಸೂರಿನ ಮೃಗಾಲಯದಲ್ಲಿ ವಿಶೇಷ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿ ಒಬ್ಬೊಬ್ಬರಿಗೆ ಎರಡೆರಡು ಛಾಯಾಚಿತ್ರವನ್ನು ಪ್ರದರ್ಶಿಸುವ ಅವಕಾಶವಿತ್ತು. ಜೇಡ ದೊಡ್ಡದಾದ ಕೀಟವನ್ನು ಹಿಡಿದು ತಿನ್ನುವ ಛಾಯಾಚಿತ್ರ ಹಾಗೂ ಹೆಜ್ಜೇನಿನ ಗೂಡಿಗೆ ಹದ್ದಿನ ಧಾಳಿಯ ಛಾಯಾಚಿತ್ರವನ್ನು ಸ್ಪರ್ಧೆಗೆ ಮಾಚಯ್ಯ ಕಳುಹಿಸಿದ್ದರು. ಹೆಜ್ಜೇನಿನ ಗೂಡಿಗೆ ಹದ್ದಿನ ದಾಳಿಯ ಛಾಯಾಚಿತ್ರ ಎರಡನೇ ಬಹುಮಾನಕ್ಕೆ ಆಯ್ಕೆಯಾದರೆ ಜೇಡÀ ಛಾಯಾಚಿತ್ರ ಗಮನ ಸೆಳೆಯಿತು. ಸುಮಾರು 4000 ಛಾಯಾಚಿತ್ರ ಮೃಗಾಲಯದ ಪ್ರದರ್ಶನದಲ್ಲಿದ್ದವು.

ಸ್ಪರ್ಧೆಯಲ್ಲಿ ಹಲವು ವಿಭಾಗಗಳಿದ್ದು ಜೂ ಕೆಟಗರಿ,ವೈಲ್ಡ್ ಲೈಫ್ ಕೆಟಗರಿ ಹಾಗೂ ಮಕ್ಕಳ ಕೆಟಗರಿಗಳಿದ್ದವು. ವೈಲ್ಡ್ ಲೈಫ್ ಕೆಟಗರಿಯಲ್ಲಿ ಮಾಚಯ್ಯನವರಿಗೆ ಬಹುಮಾನ ಬಂದಿದ್ದು ಕೊಡಗಿನವರಿಗೆ ಇದೇ ಪ್ರಥಮ ಬಾರಿಯಾಗಿದೆ. 2016ರ ಆಟೋಕ್ರಾಸ್‍ನಲ್ಲಿ ನಡೆದ ರ್ಯಾಲಿ ಫೊಟೋಗ್ರಫಿಯಲ್ಲಿ ಮೊದಲ ಬಹುಮಾನ ಪಡೆದಿದ್ದರು.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾಚಯ್ಯನವರಿಗೆ ದ್ವಿತೀಯ ಬಹುಮಾನದ ಸರ್ಟಿಫಿಕೇಟ್ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. -ಕರುಣ್ ಕಾಳಯ್ಯ