ಶ್ರೀಮಂಗಲ, ಫೆ. 22: ಆರೋಗ್ಯವಂತ ಸಮಾಜ ನಿರ್ಮಾಣವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ನಿಟ್ಟಿನಲ್ಲಿ ಗ್ರಾಮೀಣ ಜನರ ಆರೋಗ್ಯ ಖಾಯ್ದುಕೊಳ್ಳಲು ಐದನೇ ಬಾರಿಯ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರವನ್ನು ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಆಯೋಜಿಸ ಲಾಗಿದೆ. ನಾಡಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಟಿ. ಶೆಟ್ಟಿಗೇರಿ ಸಂಭ್ರಮ ಮಹಿಳಾ ಸಾಂಸ್ಕøತಿಕ ಮತ್ತು ಕ್ರೀಡಾ ಸಂಸ್ಥೆಯ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ ತಿಳಿಸಿದ್ದಾರೆ.
ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ತಾ. 26 ರಂದು ಪೂರ್ವಾಹ್ನ 9 ಗಂಟೆಯಿಂದ ಅಪರಾಹ್ನ 2 ರವರೆಗೆ ಸಂಭ್ರಮ ಮಹಿಳಾ ಸಾಂಸ್ಕøತಿಕ ಮತ್ತು ಕ್ರೀಡಾ ಸಂಸ್ಥೆ ಟಿ. ಶೆಟ್ಟಿಗೇರಿ, ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜ ಟಿ. ಶೆಟ್ಟಿಗೇರಿ, ಲೋಟಸ್ ರಿಕ್ರಿಯೇಷನ್ ಅಸೋಸಿಯೇಷನ್ ಟಿ. ಶೆಟ್ಟಿಗೇರಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕೊಡಗು ವೀರಾಜಪೇಟೆ, ಹಾಗೂ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಕೊಡಗು ಘಟಕದ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಶಿಬಿರದಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಮೈಸೂರು, ಕೊಡಗು ಇಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಡಿಕೇರಿ, ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ವೀರಾಜಪೇಟೆ, ಅಶ್ವಿನಿ ಆಸ್ಪತ್ರೆ ಮಡಿಕೇರಿ ಹಾಗೂ ಮೈಸೂರಿನಿಂದ ವಿಶೇಷ ಪರಿಣತಿ ಹೊಂದಿದ ತಜ್ಞ ವೈದ್ಯರು ಆಗಮಿಸಿ ಸ್ತ್ರೀ ರೋಗ, ಪ್ರನಾಳೀಯ ಫಲೀಕರಣ, ಚರ್ಮರೋಗ, ಮಕ್ಕಳ ರೋಗ, ವೈದ್ಯ ಶಾಸ್ತ್ರ, ಕಣ್ಣು, ಕಿವಿ, ಮೂಗು, ಗಂಟಲು, ಮೂತ್ರ ರೋಗ, ಹೃದಯ ರೋಗ, ಮೂಳೆ ರೋಗ, ಹಲ್ಲಿನ ಸಮಸ್ಯೆಗೆ ಸಂಬಂಧಿಸಿದಂತೆ ತಪಾಸಣೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಗ್ರಾಮದಲ್ಲಿ ಆಯೋಜಿಸಿರುವ ಈ ವೈದ್ಯಕೀಯ ಶಿಬಿರದ ಪ್ರಯೋಜನವನ್ನು ಎಲ್ಲಾ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಹಾಗೂ ಲೋಟಸ್ ರಿಕ್ರಿಯೇಷನ್ ಅಸೋಸಿಯೇಷನ್‍ನ ಅಧ್ಯಕ್ಷ ಪೆಮ್ಮಂಡ ರಾಜಾ ಕುಶಾಲಪ್ಪ ಕೋರಿದರು. ಹೆಚ್ಚಿನ ಮಾಹಿತಿಗೆ 9449123119, 9448582408, 9448647775, 9945629843, 9945508983, 9448720467 ದೂರವಾಣಿ ಸಂಖ್ಯೆಯನ್ನು ಸಂರ್ಕಿಸಬಹುದೆಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಟಿ. ಶೆಟ್ಟಿಗೇರಿ ಸಂಭ್ರಮ ಮಹಿಳಾ ಸಾಂಸ್ಕøತಿಕ ಮತ್ತು ಕ್ರೀಡಾ ಸಂಸ್ಥೆಯ ಅಧ್ಯಕ್ಷೆ ತಡಿಯಂಗಡ ಸೌಮ್ಯ ಕರುಂಬಯ್ಯ, ಉಪಾಧ್ಯಕ್ಷೆ ಚಂಗುಲಂಡ ಅಶ್ವಿನಿ ಸತೀಶ್, ಕಾರ್ಯದರ್ಶಿ ಉಳುವಂಗಡ ಕಾವೇರಿ ಉದಯ, ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಲೋಟಸ್ ರಿಕ್ರಿಯೇಷನ್ ಅಸೋಸಿ ಯೇಷನ್‍ನ ಅಧ್ಯಕ್ಷ ಪೆಮ್ಮಂಡ ರಾಜಾ ಕುಶಾಲಪ್ಪ ಹಾಗೂ ಉಳುವಂಗಡ ಉದಯ ಹಾಜರಿದ್ದರು.