ಮಡಿಕೇರಿ, ಫೆ. 22: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ 2016-17ನೇ ಸಾಲಿನಲ್ಲಿ ಮೂರು ತಾಲೂಕಿನಲ್ಲಿ ಮಹಿಳಾ ತರಬೇತಿ ಯೋಜನೆಯಡಿ ವಿವಿಧ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಕಾಬ್‍ಸೆಟ್ (ಕಾರ್ಪೋರೇಶನ್ ಬ್ಯಾಂಕ್, ಉದ್ಯಮಶೀಲತಾ ತರಬೇತಿ ಸಂಸ್ಥೆ) ಕೂಡಿಗೆ. ಮೂಲಕ ಅನುಷ್ಠಾನಗೊಳಿಸಲು ವಾರ್ಷಿಕ ಆದಾಯ 40 ಸಾವಿರದೊಳಗಿನ 18 ರಿಂದ 45 ವರ್ಷ ವಯೋಮಿತಿಯುಳ್ಳ ಅರ್ಹ ನಿರುದ್ಯೋಗಿ ವಿದ್ಯಾವಂತ ಮಹಿಳೆಯರಿಂದ ಹೊಲಿಗೆ ತರಬೇತಿ, ಬ್ಯೂಟೀಶಿಯನ್ ತರಬೇತಿ, ಫ್ಯಾಶನ್ ಡಿಸೈನಿಂಗ್, ಕಂಪ್ಯೂಟರ್ ತರಬೇತಿಗಳಿಗೆ ಆಸಕ್ತಿ ಇರುವ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. 28 ಕೊನೆಯ ದಿನವಾಗಿದೆ. ಹೊಲಿಗೆ ತರಬೇತಿ 7ನೇ ತರಗತಿ ಉತ್ತೀರ್ಣ, ಬ್ಯೂಟೀಷಿಯನ್ ತರಬೇತಿ, ಫ್ಯಾಷನ್ ಡಿಸೈನಿಂಗ್, ಕಂಪ್ಯೂಟರ್ ಬೇಸಿಕ್ ತರಬೇತಿಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಈ ಮೇಲಿನ ಚಟುವಟಿಕೆಗಳಲ್ಲಿ ತರಬೇತಿ ಹೊಂದಲು ಆಸಕ್ತಿ ಉಳ್ಳವರು ತಮ್ಮ ವಿದ್ಯಾರ್ಹತೆ ಹಾಗೂ ಇತರ ದಾಖಲಾತಿಗಳೊಂದಿಗೆ ಆಯಾಯ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಇಲ್ಲಿ ತಾ. 28 ರೊಳಗೆ ಅರ್ಜಿಯನ್ನು ಸಲ್ಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲಾ ಘಟಕ, ಸುದರ್ಶನ ಅತಿಥಿ ಗೃಹದ ಹಿಂಭಾಗ, ಮೈಸೂರು ರಸ್ತೆ, ಚೈನ್‍ಗೇಟ್ ಹತ್ತಿರ ದೂರವಾಣಿ ಸಂಖ್ಯೆ: 08272-228010/7338697352.