ವೀರಾಜಪೇಟೆ, ಫೆ. 22: ವೀರಾಜಪೇಟೆಗೆ ಸಮೀಪದ ದೇವಣಗೇರಿ ಬಿ.ಸಿ. ಪ್ರೌಢಶಾಲೆಯಲ್ಲಿ ಮಹಿಳೆಯರಿಗಾಗಿ ಯೋಗಾಸನ ಮತ್ತು ಪ್ರಾಣಯಾಮ ತರಬೇತಿ ಶಿಬಿರ ತಾ. 23 ರಿಂದ ಮಾರ್ಚ್ 3 ರವರೆಗೆ ನಡೆಯಲಿದೆ.

ತಾ. 23 ರಂದು ಸಂಜೆ 5 ಗಂಟೆಗೆ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಹ್ಮಣಿ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕರೂ, ಯೋಗ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳೂ ಆದ ಪಿ.ಎ. ಲಕ್ಷ್ಮೀನಾರಾಯಣ ತರಬೇತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9449121339 ಅಥವಾ 9449749990 ಸಂಪರ್ಕಿಸಬಹುದು.