ಸುಂಟಿಕೊಪ್ಪ, ಫೆ. 23: ಫ್ರೆಂಡ್ಸ್ ಯೂತ್ ಕ್ಲಬ್ ನಾಕೂರು-ಕಾನ್‍ಬೈಲ್ ಇವರ 17ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾ. 26 ರಂದು ಮುಕ್ತ ಕಬಡ್ಡಿ, ಗ್ರಾಮೀಣ ಕ್ರೀಡಾಕೂಟ ಹಾಗೂ ಸ್ಥಳೀಯರಿಗೆ ಡ್ಯಾನ್ಸ್‍ಮೇಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್. ವಿನೋದ್ ತಿಳಿಸಿದ್ದಾರೆ.

“ನ್ಯೂಸ್ ಗ್ಯಾಲರಿ ಕಚೇರಿಯಲ್ಲಿ” ಪತ್ತಿಕಾಗೋಷ್ಠಿಯನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ವಿನೋದ್ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುವ ಮತ್ತು ಗ್ರಾಮದಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ದಿಸೆಯಲ್ಲಿ ಫೆಂಡ್ಸ್ ಯೂತ್ ಕ್ಲಬ್ ಕಳೆದ 16 ವರ್ಷಗಳಿಂದ ನಾಕೂರು ಕಾನ್‍ಬೈಲ್ ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ ಎಂದರು.

ಜಿಲ್ಲೆಯ ವಿವಿಧ ಭಾಗಗಳಿಂದ ವಿವಿಧ ಕ್ರೀಡಾ ತಂಡಗಳು ಆಗಮಿಸುವ ಮೂಲಕ ಸ್ಥಳೀಯ ಕ್ರೀಡಾಪಟುಗಳು ಸೆಣಸುವ ಮೂಲಕ ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಅಲ್ಲದೆ ಈ ಭಾಗದ ಕ್ರೀಡಾ ಪ್ರತಿಭೆ ಹಾಗೂ ಆಸಕ್ತಿಯನ್ನು ಹೊಂದಿರುವ ಕ್ರೀಡಾಪಟುಗಳಿಗೆ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಕ್ರೀಡಾಕೂಟವು ಸಹಕಾರಿಯಾಗುತ್ತಿದೆ. ಸ್ಥಳೀಯ ದಾನಿಗಳ ಪ್ರೋತ್ಸಾಹದಿಂದಲೇ ಕ್ರೀಡಾ ಮೆರುಗು ಪಡೆದುಕೊಳ್ಳುತ್ತಿದೆ ಇದರಿಂದ ಪ್ರತಿಭೆಗಳನ್ನು ಉತ್ತೇಜಿಸಲು ಸಹಕಾರಿಯಾಗಿದೆ ಎಂದರು.

ಕಾನ್‍ಬೈಲ್ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. 26 ರಂದು ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಗ್ರಾಮೀಣ ಕ್ರೀಡಾ ಕೂಟಗಳನ್ನು ಏರ್ಪಡಿಸಲಾಗಿದೆ. ಸಂಜೆ ಶಾಲಾ ವೇದಿಕೆಯಲ್ಲಿ ಡ್ಯಾನ್ಸ್ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿನೋದ್ ಹೇಳಿದರು.

ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ

ರೂ. 15,000 ನಗದು, ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. 10,000 ನಗದು ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ 5,000 ನಗದು ಆಕರ್ಷಕ ಟ್ರೋಫಿ, ಮಹಿಳೆ ಹಾಗೂ ಪುರುಷರಿಗೆ ಹಗ್ಗಜಗ್ಗಾಟ, ರಸ್ತೆ ಓಟ, ಮಕ್ಕಳಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವದು ಎಂದರು.

ಬೆಳಗಿನ ವಿವಿಧ ಕ್ರೀಡಾಕೂಟಗಳ ಉದ್ಘಾಟನೆಯನ್ನು ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಭೀಮಂಡ ಪೂಣಚ್ಚ, ಲಾಯರ್ ತೋಟ ವ್ಯವಸ್ಥಾಪಕÀ ಎಸ್.ಆರ್. ಕೃಷ್ಣ, ಕಾಫಿ ಬೆಳೆಗಾರ ವಿಜಯ ಕುಮಾರ್, ಕಬಡ್ಡಿ ಪಂದ್ಯಾವಳಿಯನ್ನು ಬೆಳಿಗ್ಗೆ 11 ಗಂಟೆಗೆ ಕಾಫಿ ಬೆಳೆಗಾರರಾದ ಪುಟ್ಟರಾಜು, ಕರವಂಡ ಸಾಬು ಚಂಗಪ್ಪ, ಡಿ.ಎಂ. ಸುರೇಶ್, ಶರತ್ ರೈ, ಬಿ. ಎಸ್. ಸುನೀಲ್, ಮಾಜಿ ಗ್ರಾ. ಪಂ. ಅಧ್ಯಕ್ಷ ಧರ್ಮಪ್ಪ ಹಾಗೂ ಗ್ರಾ. ಪಂ. ಮಾಜಿ ಸದಸ್ಯ ಚೋಮಣಿ ಉದ್ಘಾಟಿಸಲಿದ್ದಾರೆ.

ಸಮಾರೋಪ ಸಮಾರಂಭಕ್ಕೆ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜನಿ ಕುಂಞÂಕೃಷ್ಣ ಚಾಲನೆ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆಯನ್ನು ಜಿ.ಪಂ. ಸದಸ್ಯರುಗಳಾದ ಕುಮುದಾ ಧರ್ಮಪ್ಪ, ಪಿ.ಎಂ. ಲತೀಫ್, ಮಾಜಿ ಜಿ.ಪಂ. ಸದಸ್ಯ ವಿ.ಪಿ. ಶಶಿಧರ್ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸದಸ್ಯ ಹೆಚ್. ಡಿ. ಮಣಿ, ನಾಕೂರು ಶಿರಂಗಾಲ ಗ್ರಾ. ಪಂ. ಉಪಾಧ್ಯಕ್ಷ ಯಶೋಧ, ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯೆ ಕವಿತ ಮಂಜುನಾಥ್, ತಾ. ಪಂ. ಮಾಜಿ ಉಪಾಧ್ಯಕ್ಷ ಜರ್ಮಿ ಡಿಸೋಜ, ಶಂಕರನಾರಾಯಣ, ಗ್ರಾ. ಪಂ. ಮಾಜಿ ಅಧ್ಯಕ್ಷೆ ಪುಷ್ಪಾವತಿ, ಮಾಜಿ ಉಪಾಧ್ಯಕ್ಷ ಭೀಮಂಡ ಪೂಣಚ್ಚ, ಗ್ರಾ.ಪಂ. ಸದಸ್ಯರುಗಳಾದ ಕೆ.ಪಿ.ವಸಂತ್, ಪಿ.ಎಂ.ಬಿಜು, ಚಂದ್ರಶೇಖರ್, ಸತೀಶ್, ಚೆನ್ನಮ್ಮ, ರಾಣಿ, ನಿವೃತ್ತ ಕರ್ನಲ್ ಎ.ಇ.ಗಣಪತಿ, ಕರ್ನಾಟಕ ಹಾಕಿ ತಂಡದ ಮಾಜಿ ಕ್ಯಾಪ್ಟನ್, ಅಂದಗೋವೆ ಗ್ರಾಮದ ಹಲವಾರು ಅತಿಥಿಗಳು, ದಾನಿಗಳು ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಎ. ವಸಂತ, ಸುರೇಶ್, ಪ್ರಧಾನ ಕಾರ್ಯದರ್ಶಿ ಎಂ.ಕೆ. ಕುಂಞÂಕೃಷ್ಣ, ಸಹ ಕಾರ್ಯದರ್ಶಿ ಪಿ.ಎಸ್. ಅನಿಲ್, ಖಜಾಂಜಿ ಕೆ.ಐ.ಮಂಜುನಾಥ್, ಕ್ರೀಡಾ ಕಾರ್ಯದರ್ಶಿ ಎನ್. ಮೋಹನ್, ಆರ್. ಪ್ರಕಾಶ್, ಗೌರವಾಧ್ಯಕ್ಷ ಕೆ.ಜೆ. ಜಗದೀಶ್, ಪಿ.ಟಿ. ಪೌಲಸ್, ಸಲಹಾ ಸಮಿತಿ ಸದಸ್ಯರುಗಳಾದ ಕೆ.ಎಸ್. ಮೊಹಮದ್, ಪಿ.ಎಸ್. ಅಜಿತ್‍ಕುಮಾರ್, ಎಂ.ಎಂ. ಶಂಕರ ನಾರಾಯಣ, ಸ್ಥಾಪಕಾಧ್ಯಕ್ಷ ಕೆ.ಪಿ. ವಸಂತ್ ಕುಮಾರ್ ಉಪಸ್ಥಿತರಿದ್ದರು.