ಆಲೂರು ಸಿದ್ದಾಪುರ, ಫೆ. 25: ಸಮಿಪದ ಗೌಡಳ್ಳಿಯ ಶ್ರೀ ನವ ದುರ್ಗಾಪರಮೇಶ್ವರಿ ದೇವಾಲಯ ಸಮಿತಿ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಇಂದು ಮತ್ತು ನಾಳೆ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ದೇವಾಲಯ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಗ್ರಾಮಸ್ಥರುÀ ಶ್ರೀ ನವ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ದೇವರಿಗೆ ವಿಶೇóಷ ಪೂಜೆ ಸಲ್ಲಿಸಿದ ನಂತರ ಜ್ಯೋತಿಯನ್ನು ಬೆಳಗಿಸುವದರ ಮೂಲಕ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಲಾಯಿತು. ದೇವಾಲಯ ಸಮಿತಿ ಮತ್ತು ಪಶುವೈದ್ಯ ಇಲಾಖೆ ವತಿಯಿಂದ ರಾಸುಗಳ ಪಶುಚಿಕಿತ್ಸಾ ಶಿಬಿರ ಹಾಗೂ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸುವ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಆರ್. ಮುತ್ತಣ್ಣ, ದೇವಾಲಯ ಸಮಿತಿಯಿಂದ ಅನೇಕ ವರ್ಷಗಳಿಂದ ಜಾತ್ರಾ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದೇವೆ, ಜಾತ್ರಾ ಮಹೋತ್ಸವದ ಅಂಗವಾಗಿ ಎಲ್ಲಾ ಜನಾಂಗದವರು, ಅನ್ಯಧರ್ಮೀಣಿಯರು ಒಂದಾಗಿ ಬೆರೆಯುವ ಉದ್ದೇಶದಿಂದ ಕ್ರೀಡಾ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ರೈತರು ರಾಸುಗಳನ್ನು ಸಾಕಾಣಿಕೆ ಮಾಡಬೇಕೆಂಬ ಉದ್ದೇಶದಿಂದ ಪಶುಚಿಕಿತ್ಸೆ ಮತ್ತು ಉತ್ತಮ ರಾಸು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಗೌಡಳ್ಳಿ ಪಶು ವೈದ್ಯಾಧಿಕಾರಿ ಡಾ.ಶ್ರೀದೇವ್ ಮಾತನಾಡಿ-ಪ್ರಸ್ತುತವಾಗಿ ರೈತರು ಬರಗಾಲವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪಶುಪಾಲಕರು ಜಾನುವಾರುಗಳು ಮತ್ತು ರಾಸುಗಳ ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಬೇಸಿಗೆ ಕಾಲವಾಗಿರುವ ಇದರ ಪಶುಪಾಲಕರು ರಾಸುಗಳಿಗೆ ಒಣಹುಲ್ಲು, ಹಸಿರು ಸೊಪ್ಪುಗಳನ್ನು ಆಹಾರವಾಗಿ ನೀಡಬೇಕು, ಪಶುವೈದ್ಯ ಇಲಾಖೆಯಿಂದ ರಾಸುಗಳಿಗೆ ವಿಟಮಿನ್ ಅಂಶವಿರುವ ಚುಚ್ಚುಮದ್ದನ್ನು ನೀಡಲಾಗುತ್ತಿದೆ, ರೈತರು ರಾಸುಗಳನ್ನು ಸಾಕಾಣಿಕೆ ಮಾಡುವದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಸರಕಾರ ರೈತರಿಗೆ ರಾಸುಗಳ ಸಾಕಾಣಿಕೆಗೆ ಸಬ್ಸಿಡಿಯಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ, ರೈತರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.

ಗೌಡಳ್ಳಿ ಗ್ರಾ.ಪಂ.ಅಧ್ಯಕ್ಷ ಧರ್ಮಾಚಾರಿ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಇಂಧೂದರ್, ಗೌಡಳ್ಳಿ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಮುಂತಾದವರು ಇದ್ದರು.

ಜಾತ್ರಾ ಮಹೋತ್ಸವದ ಅಂಗವಾಗಿ ಗೌಡಳ್ಳಿ ಮಲ್ಲೇಶ್ವರ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಗೌಡಳ್ಳಿ ಫ್ರ್ರೆಂಡ್ಸ್ ಫುಟ್‍ಬಾಲ್ ಕ್ಲಬ್ ವತಿಯಿಂದ 2ನೇ ವರ್ಷದ ಫುಟ್‍ಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.