ಮಡಿಕೇರಿ, ಫೆ. 25: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರೈತ ಬಾಂಧವರಿಗೆ ಕರ್ನಾಟಕ ಘನ ಸರ್ಕಾರವು ಕೃಷಿ ಮಾರುಕಟ್ಟೆ ಸಮಿತಿಗಳ ಮೂಲಕ ಉತ್ಪನ್ನ ಮಾರಾಟಕ್ಕಾಗಿ ಆನ್ ಲೈನ್ ಮಾರಾಟ ಪದ್ಧತಿಯನ್ನು ಜಾರಿಗೊಳಿಸಿದೆ.ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಆನ್ ಲೈನ್ ಏಕೀಕೃತ ಟೆಂಡರ್ ಮೂಲಕ ಸ್ಪರ್ಧಾತ್ಮಕವಾಗಿ, ಪಾರದರ್ಶಕವಾಗಿ ಮಾರಾಟ ಮಾಡುವ ಸಲುವಾಗಿ ರೈತರು ತಮ್ಮ ನೋಂದಣಿಗಾಗಿ ಆದಾರ್ ಕಾರ್ಡ್ ಅಥವಾ ಗುರುತಿನ ಚೀಟಿ ಮತ್ತು ತಾವು ಹೊಂದಿರುವ ಬ್ಯಾಂಕ್ ಉಳಿತಾಯ ಖಾತೆಯ ಸಂಖ್ಯೆ ಮತ್ತು ಐ.ಎಫ್.ಎಸ್.ಸಿ ಕೋಡ್ ಹಾಗೂ ಮೊಬೈಲ್ ಸಂಖ್ಯೆಗಳನ್ನು ನೀಡಿ ಸಹಕರಿಸಲು ರೈತ ಬಾಂಧವರನ್ನು ಕೋರಲಾಗಿದೆ. ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿಯೂ ಸಹ ರೈತರು ಆನ್‍ಲೈನ್‍ನಲ್ಲಿ ತಮ್ಮ ನೋಂದಣಿ ಮಾಡಿಸಿಕೊಳ್ಳಬಹುದು.

ರೈತ ನೋಂದಣಿ ಕಾರ್ಯಕ್ರಮವನ್ನು ತಾ. 28ರಂದು ಬೆಳಿಗ್ಗೆ 10 ಗಂಟೆಗೆ ಅಮ್ಮತ್ತಿ ಕೊಡವ ಸಮಾಜದಲ್ಲಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕ ಕೆ.ಜಿ ಬೋಪಯ್ಯ ಉದ್ಘಾಟನೆ ಮಾಡಲಿದ್ದಾರೆ. ರೈತ ನೋಂದಣಿ ಕಾರ್ಯಕ್ರಮದಲ್ಲಿ ರೈತರು ಭಾಗವಹಿಸಿ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ನೀಡಿ ರೈತ ನೋಂದಣಿ ಮಾಡಿಸಿಕೊಳ್ಳಬೇಕಾಗಿ ಅಧ್ಯಕ್ಷ ಎಂ.ಡಿ. ಸುವೀನ್ ಗಣಪತಿ, ಉಪಾಧ್ಯಕ್ಷ ಕೆ.ಪಿ. ಬಾಲಕೃಷ್ಣ, ಕಾರ್ಯದರ್ಶಿ ಬಿ. ಮಹೇಶ್ ತಿಳಿಸಿದ್ದಾರೆ.