ಸೋಮವಾರಪೇಟೆ, ಫೆ. 25: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 11 ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿ ಜಿಲ್ಲಾಧಿಕಾರಿಗಳು ಕರಡು ಪ್ರತಿ ಹೊರಡಿಸಿದ್ದಾರೆ. 2011ರ ಜನಗಣತಿಯಂತೆ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಮಾರ್ಚ್ 6ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚಿಸಿದ್ದಾರೆ. ವಾರ್ಡ್ ಸಂಖ್ಯೆ-1 ( ಬಸವೇಶ್ವರ ರಸ್ತೆ) ಪೂರ್ವಕ್ಕೆ: ಚೌಡ್ಲು ಗ್ರಾಮ ಪಂಚಾಯಿತಿಯ ಗಡಿ ಭಾಗದಿಂದ ಮುಂದುವರೆದು ಕಿಬ್ಬೆಟ್ಟ ಗ್ರಾಮದ ಗಡಿಭಾಗದವರೆಗೆ ಮುಂದುವರೆಯುತ್ತದೆ.
ಪಶ್ಚಿಮಕ್ಕೆ: 6ನೇ ವಾರ್ಡ್ ವಿಶ್ವೇಶ್ವರಯ್ಯ ರಸ್ತೆಯಿಂದ ದೇವಸ್ಥಾನ ರಸ್ತೆ ಹೊಂದಿಕೊಂಡಂತೆ ಮುಂದುವರೆದು ಬಸವೇಶ್ವರ ರಸ್ತೆಯ ಮುಂಭಾಗದ ಮನೆಗಳೂ ಹಾಗೂ ಶಿವಾಜಿ ರಸ್ತೆಯ ಮುಂಭಾಗದ ಮನೆಗಳನ್ನು ಸೇರಿಸಲಾಗಿದೆ.
ಉತ್ತರಕ್ಕೆ: ಡಾ. ಒ.ವಿ. ಕೃಷ್ಣಾನಂದರವರ ಮನೆಯಿಂದ ಪ್ರಾರಂಭಗೊಂಡು ಶಾಲಾ ರಸ್ತೆಗೆ ಹೋಗುವ ರಸ್ತೆಯ ಗಡಿ. ದಕ್ಷಿಣಕ್ಕೆ: ಎಸ್.ಜೆ.ಎಂ. ಶಾಲೆಗೆ ಕೊನೆಗೊಂಡು ಭಾಗಶಃ ಬಸವೇಶ್ವರ ರಸ್ತೆಯ ಮನೆಗಳಿಗೆ ಹೊಂದಿಕೊಂಡಂತೆ.
ವಾರ್ಡ್ ಸಂಖ್ಯೆ -2 (ಬಾಣಾವರ ರಸ್ತೆ): ಪೂರ್ವಕ್ಕೆ: ಬಾಣಾವರ ರಸ್ತೆಯ ಕೊನೆಯಲ್ಲಿ ಬಿ-47ರ ಕಟ್ಟಡ ಹಾಗೂ ಮಸಗೋಡು ಗ್ರಾಮದ ಗಡಿಭಾಗ.
ಪಶ್ಚಿಮಕ್ಕೆ: ಎಸ್.ಜೆ.ಎಂ. ಶಾಲಾ ಗಡಿಭಾಗ ಹಾಗೂ ನಗರೂರು ಗ್ರಾಮಕ್ಕೆ ಹೊಂಡಿಕೊಂಡಂತೆ ಗಡಿಭಾಗ.
ಉತ್ತರಕ್ಕೆ: ಬಸವೇಶ್ವರ ರಸ್ತೆಯ ಭಾಗಶಃ ಗಡಿಭಾಗದಿಂದ ಮುಂದುವರೆದು ಕಟ್ಟಡ ಸಂಖ್ಯೆ ಎ- 11ರ ಗಡಿ.
ದಕ್ಷಿಣಕ್ಕೆ: ಬಾಣಾವರ ರಸ್ತೆಯ ಬಸ್ ನಿಲ್ದಾಣದಿಂದ ಮುಂದುವರೆದು ಸುಂದರರವರ ಖಾಲಿ ನಿವೇಶನ ಜಾಗವಾಗಿ ಚಿಲುಮೆ ಎಸ್ಟೇಟ್ ಕೊನೆಯ ಭಾಗದವರೆಗೆ ಮುಂದುವರೆಯಲಿದೆ.
ವಾರ್ಡ್ ಸಂಖ್ಯೆ -3 (ವೆಂಕಟೇಶ್ವರ ಬ್ಲಾಕ್): ಪೂರ್ವಕ್ಕೆ: ಮಸಗೋಡು ಗ್ರಾಮಕ್ಕೆ ಸೇರಿದ ಕಾಫಿ ತೋಟವಾಗಿ ಮುಂದುವರೆಯುತ್ತದೆ.
ಪಶ್ಚಿಮಕ್ಕೆ: ನಗರೂರು ಗ್ರಾಮದ ಗಡಿಭಾಗವಾಗಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯು ಕೂಡ ಆಗಿರುತ್ತದೆ.
ಉತ್ತರಕ್ಕೆ: ಸೋಮವಾರಪೇಟೆ ಬಸವೇಶ್ವರ ರಸ್ತೆ ಭಾಗಶಃ ಹಾಗೂ ಎಸ್.ಜೆ.ಎಂ. ಶಾಲೆಯಿಂದ ಪ್ರಾರಂಭವಾಗಿ ಬೇಳೂರು ರಸ್ತೆಗೆ ಹೊಂದಿಕೊಂಡಂತೆ.
ದಕ್ಷಿಣಕ್ಕೆ: ವಲ್ಲಭಭಾಯಿ ರಸ್ತೆಯ ಗಡಿಭಾಗವಾಗಿ ಮುಂದುವರೆದು ಬೇಳೂರು ಪಂಚಾಯಿತಿಗೆ ಸೇರಿದ ನೇರುಗಳಲೆ ಗ್ರಾಮದ ಗಡಿಗೆ ಸೇರುತ್ತದೆ.
ವಾರ್ಡ್ ಸಂಖ್ಯೆ -4 ( ರೇಂಜರ್ ಬ್ಲಾಕ್ 1ನೇ ಹಂತ): ಪೂರ್ವಕ್ಕೆ: ಪವರ್ ಹೌಸ್ ರಸ್ತೆಗಾಗಿ ಮುಂದುವರೆದು ಕೆ.ಇ.ಬಿ.ಗೆ ಹೋಗುವ ರಸ್ತೆಗಾಗಿ ಮುಂದುವರೆಯುತ್ತದೆ. ಸದರಿ 2 ಮತ್ತು 3 ರ ವಾರ್ಡ್‍ಗಳ ಗಡಿಭಾಗಗಳನ್ನು ಸೇರಿಕೊಳ್ಳುತ್ತದೆ.
ಪಶ್ಚಿಮಕ್ಕೆ: ಸೋಮವಾರಪೇಟೆ ರೇಂಜರ್ ಬ್ಲಾಕ್ ಮಸೀದಿಗಾಗಿ ಮುಂದುವರೆದು ಅರಣ್ಯ ಇಲಾಖೆಗೆ ಹೊಂದಿಕೊಂಡಂತೆ ಮುಂದುವರೆದು ರೇಂಜರ್ ಬ್ಲಾಕ್ 9ನೇ ವಾರ್ಡಿಗೆ ಹೊಂದಿಕೊಂಡಂತೆ.
ಉತ್ತರಕ್ಕೆ: ವಾರ್ಡ್ ನಂ.2ರ ಗಡಿಭಾಗ ಸರ್ಕಾರಿ ಆಸ್ಪತ್ರೆಯಿಂದ ಮುಂದುವರೆದು ಮಹಿಳಾ ಸಮಾಜ ರಸ್ತೆಗಾಗಿ ಚಲಿಸಿ ರಾಮಮಂದಿರ ರಸ್ತೆಯ ಗಡಿಭಾಗದವರೆಗೆ.
ದಕ್ಷಿಣಕ್ಕೆ: ನಗರೂರು ಗ್ರಾಮದ ಸ.ನಂ. 91 ಮತ್ತು 89ರ ಗದ್ದೆಭಾಗದಿಂದ ಮುಂದುವರೆದು ಪಟ್ಟಣ ಪಂಚಾಯಿತಿ ಎಲ್ಲೆಯ ಗಡಿಭಾಗದವರೆಗೆ.
ವಾರ್ಡ್ ಸಂಖ್ಯೆ -5 ( ದೇವಸ್ಥಾನ ರಸ್ತೆ): ಪೂರ್ವಕ್ಕೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ದೇವಸ್ಥಾನ ರಸ್ತೆಗಾಗಿ ಪ್ರಾರಂಭಗೊಂಡು ಬ್ಲಾನ್ ಕಾಫಿಗಾಗಿ ಅಶೋಕ ರಸ್ತೆಗೆ ಹೊಂದಿಕೊಂಡಂತೆ ಪ್ರಾರಂಭಗೊಳ್ಳುತ್ತದೆ.
ಪಶ್ಚಿಮಕ್ಕೆ: ಪಟ್ಟಣ ಪಂಚಾಯಿತಿ ಆಸ್ಪತ್ರೆ ಮುಂಭಾಗದಿಂದ ಕೆಳಭಾಗವಾಗಿ ಚಲಿಸಿ ಗಣಪತಿ ದೇವಸ್ಥಾನದ ಮುಂಭಾಗದಿಂದ ತ್ಯಾಗರಾಜ ರಸ್ತೆ ಹೊಂದಿಕೊಂಡಂತೆ ಕೊನೆಗೊಳ್ಳುತ್ತದೆ.
ಉತ್ತರಕ್ಕೆ: ಸ್ಟೇಟ್ ಬ್ಯಾಂಕ್ ರಸ್ತೆಗೆ ಹೊಂದಿಕೊಂಡಂತೆ ಪ್ರಾರಂಭವಾಗಿ ದೇವಸ್ಥಾನ ರಸ್ತೆಯ ಮುಂಭಾಗದ ಮನೆಗಳು ಸೇರಿಕೊಂಡು ಗಡಿ ಪ್ರಾರಂಭವಾಗುತ್ತದೆ.
ದಕ್ಷಿಣಕ್ಕೆ: ಅಶೋಕ ರಸ್ತೆಯಿಂದ ಪ್ರಾರಂಭವಾಗಿ ರಾಮಮಂದಿರ ರಸ್ತೆಯಿಂದ ಮಹಿಳಾ ಸಮಾಜ ರಸ್ತೆಗಾಗಿ ಚಲಿಸಿ ಆಸ್ಪತ್ರೆ ರಸ್ತೆಗೆ ಕೊನೆಗೊಳ್ಳುತ್ತದೆ.
ವಾರ್ಡ್ ಸಂಖ್ಯೆ -6 (ವಿಶ್ವೇಶ್ವರಯ್ಯ ಬ್ಲಾಕ್): ಪೂರ್ವಕ್ಕೆ: ವಿಶ್ವೇಶ್ವರಯ್ಯ ರಸ್ತೆ ಮುಂಭಾಗದ ಮನೆಯಿಂದ ಪ್ರಾರಂಭಗೊಂಡು ಶಾಲಾ ರಸ್ತೆ, ಕಿಬ್ಬೆಟ್ಟ ಗ್ರಾಮದ ಗಡಿಭಾಗದವರೆಗೆ.
ಪಶ್ಚಿಮಕ್ಕೆ: ಸ್ಟೇಟ್ ಬ್ಯಾಂಕ್ ರಸ್ತೆಯಿಂದ ಮುಂದುವರೆದು ಶಾಲಾ ರಸ್ತೆಗಾಗಿ ಚಲಿಸಿ ಶತಮಾನೋತ್ಸವ ಭವನವರೆಗೆ ಮುಂದುವರೆಯುತ್ತದೆ.
ಉತ್ತರಕ್ಕೆ: ಪಟ್ಟಣ ಪಂಚಾಯಿತಿ ನೇತಾಜಿ ಪಾರ್ಕ್ ಆನೆಕೆರೆ ಮುಂಭಾಗದಿಂದ ಶಾಲಾ ರಸ್ತೆ ಕೊನೆಯವರೆಗೂ ಮುಂದುವರೆಯುತ್ತದೆ.
ದಕ್ಷಿಣಕ್ಕೆ: ವಿಶ್ವೇಶ್ವರಯ್ಯ ರಸ್ತೆಯಿಂದ ಎಂ.ಜಿ. ರಸ್ತೆಯ ಮುಂಭಾಗದ ಮನೆಯಿಂದ ಚಲಿಸಿ ಮಡಿಕೇರಿ ರಸ್ತೆಯವರೆಗೆ ಕೊನೆಗೊಳ್ಳುತ್ತದೆ.
ವಾರ್ಡ್ ಸಂಖ್ಯೆ -7 (ರೇಂಜರ್ ಬ್ಲಾಕ್ 2ನೇ ಹಂತ): ಪೂರ್ವಕ್ಕೆ: ಸೋಮವಾರಪೇಟೆ ಲೋಡರ್ಸ್ ಕಾಲೋನಿ ರಸ್ತೆಗಾಗಿ ಮುಂದುವರೆದು ಅರಣ್ಯ ಇಲಾಖೆ ಮುಂಭಾಗದ ರಸ್ತೆಗಾಗಿ ವಾರ್ಡ್ ನಂ. 8ಕ್ಕೆ ಸೇರುವ ರಸ್ತೆಯ ಗಡಿಭಾಗದವರೆಗೆ.
ಪಶ್ಚಿಮಕ್ಕೆ: ಮಹದೇಶ್ವರ ಬ್ಲಾಕ್ ರಸ್ತೆ ಕೊನೆಯಿಂದ ಸಣ್ಣಮ್ಮನವರ ಮನೆ ಮುಂಭಾಗದ ರಸ್ತೆ ಹಾಗೂ ವಾರ್ಡ್ ನಂ. 8 ಜನತಾ ಕಾಲೋನಿ ಪ್ರಾರಂಭಗೊಳ್ಳುವ ಗಡಿಭಾಗದವರೆಗೆ.
ಉತ್ತರಕ್ಕೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಾಲೂಕು ಕಚೇರಿಯಿಂದ ಪ್ರಾರಂಭ ಗೊಂಡು ಪೊಲೀಸ್ ಕಚೇರಿ ಹಾಗೂ ವಸತಿಗೃಹಗಳು ಸೇರಿಕೊಂಡಂತೆ ಪ್ರಾರಂಭವಾಗಿ ಮುಂದುವರೆದು ವಾರ್ಡ್ ನಂ. 8ರ ಗಡಿಗೆ ಮುಕ್ತಾಯವಾಗುತ್ತದೆ.
ದಕ್ಷಿಣಕ್ಕೆ: ರೇಂಜರ್ ಬ್ಲಾಕ್ ರಸ್ತೆಗೆ ಹೊಂದಿಕೊಂಡಂತೆ ಪ್ರಾರಂಭವಾಗಿ ವಾರ್ಡ್ ನಂ. 8ರ ಜನತಾ ಕಾಲೋನಿ ಹೋಗುವ ರಸ್ತೆಗಾಗಿ ಮುಂದುವರೆದು ನಗರೂರು ಗ್ರಾಮದ ಗಡಿ ಭಾಗದವರೆಗೆ ಮುಕ್ತಾಯವಾಗುತ್ತದೆ.
ವಾರ್ಡ್ ಸಂಖ್ಯೆ -8 (ಜನತಾ ಕಾಲೋನಿ): ಪೂರ್ವಕ್ಕೆ: ರೇಂಜರ್ ಬ್ಲಾಕ್ 7ನೇ ವಾರ್ಡ್ ಗಡಿಭಾಗದಿಂದ ಪ್ರಾರಂಭಗೊಂಡು 7ನೇ ವಾರ್ಡ್ ಮುಕ್ತಾಯದವರೆಗೆ ಮುಂದುವರೆ ಯುತ್ತದೆ. ಪಶ್ಚಿಮಕ್ಕೆ: ಸೋಮವಾರ ಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹದೇಶ್ವರ ಬ್ಲಾಕ್ 10ನೇ ವಾರ್ಡ್ ಗಡಿಭಾಗದವರೆಗೆ ಮುಂದುವರೆದು ಬಗರೂರು ಗ್ರಾಮದ ಬೇಳೂರು ಗ್ರಾಮ ಪಂಚಾಯಿತಿ ಗಡಿಭಾಗ ಪೂರ್ವವಾಗಿ ಸುತ್ತುವರೆದಿರುತ್ತದೆ.
ಉತ್ತರಕ್ಕೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಹದೇಶ್ವರ ಬ್ಲಾಕ್ ರಸ್ತೆಯ ಗಡಿಭಾಗ ಹಾಗೂ ರೇಂಜರ್ ಬ್ಲಾಕ್‍ಗೆ ಹೊಂದಿಕೊಂಡಂತೆ ಕೊನೆಗೊಳ್ಳುತ್ತದೆ.
ದಕ್ಷಿಣಕ್ಕೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಗಡಿಭಾಗ ವಾಗಿದ್ದು ಸದರಿ ನಗರೂರು ಗ್ರಾಮ (ಬೇಳೂರು ಗ್ರಾಮ ಪಂಚಾಯಿತಿ ಗಡಿ ಭಾಗ ಪೂರ್ಣವಾಗಿ ಸುತ್ತುವರೆದಿರುತ್ತದೆ).
ವಾರ್ಡ್ ಸಂಖ್ಯೆ -9 (ಸಿದ್ದಲಿಂಗೇಶ್ವರ ಬ್ಲಾಕ್) ಪೂರ್ವಕ್ಕೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರೇಂಜರ್ ಬ್ಲಾಕಿನಲ್ಲಿ ಸಣ್ಣಮ್ಮನವರ ಮನೆಯಿಂದ ಪ್ರಾರಂಭಗೊಂಡು ಬಿ.ಟಿ. ಶಿವರಾಜುರವರ ವಾಸದ ಮನೆಗಾಗಿ ಮುಂದುವರೆದು ಪೋಲೀಸ್ ವಸತಿ ಗೃಹ ಬಳಿ ಕೊನೆಗೊಳ್ಳುತ್ತದೆ.
ಪಶ್ಚಿಮಕ್ಕೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಂ.ಡಿ. ಬ್ಲಾಕ್ ಎರಡನೇ ಹಂತ ಗಡಿ ಭಾಗದಿಂದ ಪ್ರಾರಂಭಗೊಂಡು ದಕ್ಷಿಣಾಭಿಮುಖವಾಗಿ ಚಲಿಸಿ ನಗರೂರು ಗ್ರಾಮದ ಗಡಿ ಭಾಗಕ್ಕೆ ಹೊಂಡಿಕೊಂಡಂತೆ ತಲುಪುತ್ತದೆ.
ಉತ್ತರಕ್ಕೆ: ಶ್ರೀ ಆರ್.ಸಿ. ವಿಜಯರವರ ಮನೆಗಾಗಿ ಪೂರ್ವದ ದಿಕ್ಕಿಗಾಗಿ ಮಂದುವರೆದು ಪಟ್ಟಣ ಪಂಚಾಯಿತಿ ಗ್ರಂಥಾಲಯದ ಕಟ್ಟಡವರೆಗೆ ತಲುಪಿ ಸಹಕಾರ ಭವನದ ಕಟ್ಟಡಕ್ಕೆ ಕೊನೆಗೊಳ್ಳುತ್ತದೆ.
ದಕ್ಷಿಣಕ್ಕೆ: ಸದರಿ ಪಟ್ಟಣ ಪಂಚಾಯಿತಿ ವ್ಯಾಪ್ತಿ ಶನಿದೇವರ ದೇವಸ್ಥಾನದಿಂದ ಪ್ರಾರಂಭಗೊಂಡು ಸದರಿ ಎಂ.ಡಿ. ಬ್ಲಾಕ್ ರಸ್ತೆಗಾಗಿ ಮುಂದುವರೆದು ಜನತಾ ಕಾಲೋನಿ ಗಡಿ ಹಾದು ರೇಂಜರ್ ಬ್ಲಾಕ್ ಗಡಿಗಾಗಿ ಕೊನೆಗೊಳ್ಳುತ್ತದೆ.
ವಾರ್ಡ್ ಸಂಖ್ಯೆ -10 (ಮಹದೇಶ್ವರ ಬ್ಲಾಕ್) ಪೂರ್ವಕ್ಕೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವಾರ್ಡ್ ನಂ. 8ರ ಗಡಿಭಾಗದಿಂದ ಪ್ರಾರಂಭಗೊಂಡು ನಗರೂರು ಗ್ರಾಮಕ್ಕೆ ಸೇರಿದ ಗಡಿಭಾಗಕ್ಕೆ ಹೊಂದಿಕೊಂಡಂತೆ ಕೊನೆಗೊಳ್ಳುತ್ತದೆ.
ಪಶ್ಚಿಮಕ್ಕೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಕ್ಕೆಹೊಳೆ ಗಡಿಭಾಗದಿಂದ ಮುಂದುವರೆದು ಬಿ.ಎಂ. ದಿನೇಶರವರ ಮನೆವರೆಗೆ ಮುಂದುವರೆಯುತ್ತದೆ.
ಉತ್ತರಕ್ಕೆ: ಪಟ್ಟಣ ವ್ಯಾಪ್ತಿಯಲ್ಲಿ ಎಲ್.ಐ.ಸಿ. ಕಚೇರಿ ಹಿಂಭಾಗವಾಗಿ ಹಾದು ಕೊಡವ ಸಮಾಜದ ಹಿಂಭಾಗದಿಂದ ಮಹದೇಶ್ವರ ಬ್ಲಾಕ್ ರಸ್ತೆಗೆ ಹೊಂದಿಕೊಂಡಂತೆ.
ದಕ್ಷಿಣಕ್ಕೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗಡಿಭಾಗ ಸ.ನಂ. 64/1 ಮತ್ತು 64/2, ಮುಂದುವರೆದು ನಗರೂರು ಸ.ನಂ. 60/2, 57ಕ್ಕೆ ಸೇರಿಕೊಂಡಂತೆ.
ವಾರ್ಡ್ ಸಂಖ್ಯೆ -11 (ಸಿ.ಕೆ. ಸುಬ್ಬಯ್ಯ ರಸ್ತೆ) ಪೂರ್ವಕ್ಕೆ: ವಾರ್ಡ್ ನಂ. 5ರ ಆಸ್ಪತ್ರೆ ರಸ್ತೆಯಿಂದ ಪ್ರಾರಂಭಗೊಂಡು ತ್ಯಾಗರಾಜ ರಸ್ತೆ ಮುಖಾಂತರ ಖಾಸಗಿ ಬಸ್ ನಿಲ್ದಾಣ ಹಾದು ಸರ್ಕಾರಿ ಆಸ್ಪತ್ರೆ ಮುಂಭಾಗ ದಿಂದ ಪ್ರಾರಂಭಗೊಂಡಿರುತ್ತದೆ.
ಪಶ್ಚಿಮಕ್ಕೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಮಾನು ಮಡಿಕೇರಿ ರಸ್ತೆಯಿಂದ ಮುಂದು ವರೆದು ಸಫಾಲಿ ಬಾರ್ ರಸ್ತೆಯ ಮುಖಾಂತರ ಮಾನಸಹಾಲ್ ರಸ್ತೆಗೆ ಹೋಗುವ ದಾರಿಗಾಗಿ ಮುಂದುವರೆಯುತ್ತದೆ.
ಉತ್ತರಕ್ಕೆ: ಪೌರ ಕಾರ್ಮಿಕರ ಕಾಲೋನಿಯಿಂದ ಮುಂದುವರೆದು ಲೋಡರ್ಸ್ ಕಾಲೋನಿ ರಸ್ತೆಗಾಗಿ ಎಂ.ಜಿ. ರಸ್ತೆ ಕೊನೆಯವರೆಗೆ ಮುಂದುವರೆಯುತ್ತದೆ.
ದಕ್ಷಿಣಕ್ಕೆ: ಹಳೆಯ ಪೋಲೀಸ್ ಕಚೇರಿಯಿಂದ ಪ್ರಾರಂಭಗೊಂಡು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಮುಂಭಾಗದಿಂದ ಕ್ಲಬ್ ರಸ್ತೆ ಹಿಂಭಾಗದ ಮನೆಗಳನ್ನು ಸೇರಿಕೊಂಡಂತೆ ಪಟ್ಟಣ ಪಂಚಾಯಿತಿ ಕುರಿದೊಡ್ಡಿ, ಕಕ್ಕೆಹೊಳೆ ರಸ್ತೆಯವರೆಗೆ ವ್ಯಾಪ್ತಿ ಹೊಂದಿದೆ.